ಇತ್ತೀಚೆಗಷ್ಟೇ ವಿಧಿವಶರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್‌ ಅವರ ಚಿತಾಭಸ್ಮವನ್ನು ಮಂಗಳವಾರ ಇಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.  

ಡೆಹ್ರಾಡೂನ್‌(ಉತ್ತರಾಖಂಡ್‌): ಇತ್ತೀಚೆಗಷ್ಟೇ ವಿಧಿವಶರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್‌ ಅವರ ಚಿತಾಭಸ್ಮವನ್ನು ಮಂಗಳವಾರ ಇಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂದರ್ಭದಲ್ಲಿ ಉತ್ತರಾಖಂಡ್‌ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿ ಮದನ್‌ ಕೌಶಿಕ್‌ ಅವರ ಉಪಸ್ಥಿತಿಯಲ್ಲಿದ್ದರು. ಬಳಿಕ ಮಾತನಾಡಿದ ತ್ರಿವೇಂದ್ರ ಸಿಂಗ್‌ ಅವರು, ‘ಅನಂತ ಕುಮಾರ್‌ ಅವರು ಉತ್ತರಾಖಂಡಕ್ಕೆ ಒಳ್ಳೆಯದನ್ನೇ ಬಯಸುವ ನಾಯಕರಾಗಿದ್ದರು.

 ರಾಜ್ಯದಲ್ಲಿ ತಲೆ ಎತ್ತಿರುವ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಹಾಗೂ ತಾಂತ್ರಿಕತೆ ಸಂಸ್ಥೆಯು ಅನಂತ ಕುಮಾರ್‌ ಅವರ ಕೊಡುಗೆ,’ ಎಂದು ಬಣ್ಣಿಸಿದರು. ಅವರು ಉತ್ತರಾಖಂಡ್‌ನ ಜನತೆಯ ಹೃದಯ ಮತ್ತು ನೆನಪಿನಲ್ಲಿ ಸದಾ ಚಿರಾಯುವಾಗಿರುತ್ತಾರೆ ಎಂದರು.