ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ನಿನ್ನೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತಾ, ಮುಸ್ಲಿಂಮರಿಗೆ ಮಾನ್ಯತೆ ಕೊಟ್ಟಿದ್ದೇವೆ ಎನ್ನಲು ಬಿಜೆಪಿ ಯಾರು? ಸಂವಿಧಾನವು ನಮಗೆ ಹಕ್ಕನ್ನು ನೀಡಿದೆ. ಸಂವಿಧಾನವು ನಮ್ಮ ಹಕ್ಕುಗಳನ್ನು ರಕ್ಷಿಸುತ್ತಿದೆ ಎಂದು ಲೋಕಸಭಾ ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.
ನವದೆಹಲಿ (ಏ.22): ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ನಿನ್ನೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತಾ, ಮುಸ್ಲಿಂಮರಿಗೆ ಮಾನ್ಯತೆ ಕೊಟ್ಟಿದ್ದೇವೆ ಎನ್ನಲು ಬಿಜೆಪಿ ಯಾರು? ಸಂವಿಧಾನವು ನಮಗೆ ಹಕ್ಕನ್ನು ನೀಡಿದೆ. ಸಂವಿಧಾನವು ನಮ್ಮ ಹಕ್ಕುಗಳನ್ನು ರಕ್ಷಿಸುತ್ತಿದೆ ಎಂದು ಲೋಕಸಭಾ ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್ ಹೇಳಿಕೆಯನ್ನು ಕಾಂಗ್ರೆಸ್ ಕೂಡಾ ಖಂಡಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಸಮಾಜದ ಒಂದು ನಿರ್ದಿಷ್ಟ ವರ್ಗವು ತಮಗೆ ವೋಟ್ ನೀಡುವುದಿಲ್ಲ ಎನ್ನುವುದನ್ನು ಕೆಲವರು ಹೇಳುತ್ತಿರುತ್ತಾರೆ. ಇದಕ್ಕೆ ಕಾರಣವೇನೆಂದು ನನಗೆ ಅರ್ಥವಾಗಿಲ್ಲ. ಈ ‘ಮಾನ್ಯತೆ’ ವಿಚಾರ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮುಸ್ಲೀಂಮರು ಬಿಜೆಪಿಗೆ ವೋಟ್ ನೀಡದೇ ಇದ್ದರೂ ನಾವು ಅವರಿಗೆ ಮಾನ್ಯತೆ ನೀಡಿದ್ದೇವೆ. ನಾವು ದೇಶವನ್ನು ಆಳುತ್ತಿದ್ದೇವೆ. 13 ಮಂದಿ ಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಸೇವಾಕ್ಷೇತ್ರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮುಸ್ಲೀಂ ವ್ಯಕ್ತಿಯನ್ನು ನಾವು ಬಲಿಪಶು ಮಾಡಿದ್ದೇವಾ? ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವಾ? ನಾವು ಮುಸ್ಲೀಂ ಮತವನ್ನು ಪಡೆಯದೇ ಇದ್ದರೂ ನಾವು ಅವರಿಗೆ ಗೌರವವನ್ನು ನೀಡಿದ್ದೇವೆ ಎಂದು ರವಿ ಶಂಕರ್ ಪ್ರಸಾದ್ ನಿನ್ನೆ ಹೇಳಿಕೆ ನೀಡಿದ್ದರು.
