ಪ್ರಧಾನಿ ವಿರುದ್ಧ ಹರಿಹಾಯ್ದ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ| ಪ್ರಧಾನಿ ಸಂವಿಧಾನ ನೆನಪಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದ ಒವೈಸಿ|  ಗೋ ನೀತಿ ಟೀಕಿಸುವವರು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದ ಮೋದಿ| ‘ಸಂವಿಧಾನದಲ್ಲಿ ಮಾನವರಿಗೆ ಬದುಕುವ ಹಕ್ಕು ಮತ್ತು ಸಮಾನತೆ ನೀಡಲಾಗಿದೆ’|

ನವದೆಹಲಿ(ಸೆ.11): ಗೋ ನೀತಿ ಟೀಕಿಸುವವರು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ದೇಶದ ಸಂವಿಧಾನವನ್ನು ನೆನಪಿಸಿಕೊಳ್ಳುವ ವಿಶ್ವಾಸವಿದೆ ಎಂದಿರುವ ಒವೈಸಿ, ಗೋವು ನಮ್ಮ ಹಿಂದೂ ಸಹೋದರರಿಗೆ ಪವಿತ್ರ ಪ್ರಾಣಿ ಹೌದಾದರೂ ಸಂವಿಧಾನದಲ್ಲಿ ಮಾನವರಿಗೆ ಬದುಕುವ ಹಕ್ಕು ಮತ್ತು ಸಮಾನತೆಯನ್ನು ನೀಡಲಾಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Scroll to load tweet…

ಇಂದು ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಕೆಲವರು ಓಂ ಮತ್ತು ಗೋವು ಎಂಬ ಶಬ್ದ ಕೇಳಿದ ತಕ್ಷಣ ದೇಶ 16ನೇ ಶತಮಾನಕ್ಕೆ ಮರಳಿದೆ ಎಂದು ಕಿರುಚುತ್ತಾರೆ. ಅಂತಹ ಜನರು ರಾಷ್ಟ್ರವನ್ನು ನಾಶಪಡಿಸುತ್ತಾರೆ ಎಂದು ಗುಡುಗಿದ್ದರು.