ಹೈದರಾಬಾದ್(ಜೂ.30): ಯಾವುದೇ ಕಾರಣಕ್ಕೂ ತಾವು ಜೈ ಶ್ರೀರಾಮ್ ಮತ್ತು ವಂದೇ ಮಾತರಂ ಘೋಷಣೆ ಕೂಗುವುದಿಲ್ಲ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಜೈ ಶ್ರೀರಾಮ್ ಮತ್ತು ವಂದೇ ಮತರಂ ಘೋಷಣೆಗಳ ಮೂಲಕ, ಭಾರತೀಯ ಮುಸಲ್ಮಾನರಲ್ಲಿ ಭಯ ಹುಟ್ಟಿಸುವ ಷಡ್ಯಂತ್ರ ನಡೆದಿದೆ ಎಂದು ಒವೈಸಿ ಆರೋಪಿಸಿದ್ದಾರೆ. 

ಜೈಶ್ರೀರಾಮ್ ಹಾಗೂ ವಂದೇ ಮಾತರಂ ಘೋಷಣೆಯನ್ನು ಯಾರೂ ಬೇಕಾದರೂ ಹೇಳಲಿ, ಆದರೆ ಅದನ್ನು ಹೇಳುವಂತೆ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

ಧಾರ್ಮಿಕ ಘೋಷಣೆ ಕೂಗಲು ನಿರಾಕರಿಸುವ ಕಾರಣಕ್ಕೆ ಮುಸ್ಲಿಮರ ವಿರುದ್ಧ ದ್ವೇಷ ಹರಡಲಾಗುತ್ತಿದ್ದು, ಇದು RSS ಮತ್ತು ಬಿಜೆಪಿಯ ಅಣತಿ ಮೇರೆಗೆ ನಡೆಯುತ್ತಿದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದ್ದಾರೆ.