ತೆಲಂಗಾಣದಲ್ಲಿ ತಾರಕಕ್ಕೇರಿದ ಚುನಾವಣಾ ಸಮರ! ಅಮಿತ್ ಶಾ, ಓವೈಸಿ ನಡುವೆ ಮಾತಿನ ಸಮರ! ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್‌ನಿಂದ ಸ್ಪರ್ಧಿಸಿ! ಅಮಿತ್ ಶಾ ಗೆ ಸವಾಲೆಸೆದ ಅಸದುದ್ದೀನ್ ಓವೈಸಿ! ಬಿಜೆಪಿ ತನ್ನ ನಾಲ್ಕು ಸೀಟು ಉಳಿಸಿಕೊಂಡರೆ ಹೆಚ್ಚು 

ಹೈದರಾಬಾದ್(ಸೆ.16): 2019 ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾಗೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, 2019 ರಲ್ಲಿ ಹೈದರಾಬಾದ್ ನಿಂದ ಸ್ಪರ್ಧಿಸಲು ಅಮಿತ್ ಶಾ ಗೆ ಸವಾಲು ಹಾಕಿದ್ದಾರೆ. 

ಬಿಜೆಪಿಗೆ ತೆಲಂಗಾಣದಲ್ಲಿ ಈಗಿರುವ 4 ಸ್ಥಾನಗಳನ್ನೂ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಓವೈಸಿ ಹೇಳಿದ್ದು, ರಾಜ್ಯದಲ್ಲಿ ಬಿಜೆಪಿ ಬಲಪಡಿಸಲು ಖುದ್ದು ಅಮಿತ್ ಶಾ ಅವರೇ ಇಲ್ಲಿಂದ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಕೆಸಿಆರ್ ನಿರ್ಧಾರವನ್ನು ಪ್ರಶ್ನಿಸಿದ್ದ ಅಮಿತ್ ಶಾಗೆ 2002 ರಲ್ಲಿ ಗುಜರಾತ್ ಗಲಭೆ ನಂತರ ಅವಧಿಗೂ ಮುನ್ನ ನಡೆದಿದ್ದ ಚುನಾವಣೆಯನ್ನು ಓವೈಸಿ ನೆನಪಿಸಿದ್ದಾರೆ. 2002 ರಲ್ಲಿ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರೂ ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿದ್ದು, ಅಮಿತ್ ಶಾ ಅವರಿಗೆ ನೆನಪಿಲ್ಲವೇ ಎಂದು ಹರಿಹಾಯ್ದರು.