ನವದೆಹಲಿ[ಡಿ.18]: ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನಪ್ಪುವುದರೊಂದಿಗೆ ವಸುಂಧರಾ ರಾಜೇ ಸಿಎಂ ಹುದ್ದೆ ಕಳೆದುಕೊಂಡಿದ್ದಾರೆ. ಹೀಗಾಗಿ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಅವರು ಹುದ್ದೆಯಲ್ಲಿ ಮುಂದುವರೆದ ದೇಶದ ಏಕಮಾತ್ರ ಮಹಿಳಾ ಸಿಎಂ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

ವರ್ಷಾರಂಭದಲ್ಲಿ ವಸುಂಧರಾ ರಾಜಸ್ಥಾನ ಮತ್ತು ಮೆಹಬೂಬಾ ಮುಫ್ತಿ ಕಾಶ್ಮೀರದ ಸಿಎಂ ಆಗಿದ್ದರು. ಹೀಗಾಗಿ ದೇಶದಲ್ಲಿ 3 ಮಹಿಳಾ ಸಿಎಂಗಳ ಅಧಿಪತ್ಯವಿತ್ತು.