ಬಿಜೆಪಿ ನಾಯಕರು ಜೈಲಿಗೆ ಹೋಗುವುದು ಖಚಿತ

First Published 8, Jul 2018, 10:28 AM IST
As PM makes 'bail gaadi' jibe, Cong warns BJP leaders of sending Jail
Highlights

ಬಿಜೆಪಿ ಅಧ್ಯಕ್ಷ ಅಮಿತ್‌ ಶಾರ ಮಗ ಸೇರಿದಂತೆ ಹಲವು ಸಚಿವರುಗಳ ಭ್ರಷ್ಟಾಚಾರದ ವಿಷಯದ ಬಗ್ಗೆ ನಾವು ಗಮನ ಸೆಳೆಯುತ್ತಿದ್ದರೂ, ಈ ವಿಷಯಗಳಲ್ಲಿ ಮೋದಿ ಯಾವಾಗಲೂ ಮೌನ ಕಾಪಾಡಿಕೊಂಡು ಬಂದಿದ್ದಾರೆ ಎಂದು  ಕಾಂಗ್ರೆಸ್ ವಕ್ತಾರ ಆರ್‌.ಪಿ.ಎನ್‌. ಸಿಂಗ್‌ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅನ್ನು ಬೇಲ್‌ (ಜಾಮೀನು) ಗಾಡಿಗೆ ಹೋಲಿಸಿ ವ್ಯಂಗ್ಯವಾಡಿದ ಬೆನ್ನಲ್ಲೇ, ತಿರುಗೇಟು ನೀಡಿರುವ ಕಾಂಗ್ರೆಸ್‌, ಭ್ರಷ್ಟಾಚಾರಿ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿ ರಕ್ಷಿಸುತ್ತಿದ್ದಾರೆ. 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲಾ ಭ್ರಷ್ಟ ಬಿಜೆಪಿ ನಾಯಕರು ಜೈಲು ಸೇರುವುದು ಖಚಿತ ಎಂದು ಹೇಳಿದೆ. 

ಬಿಜೆಪಿ ಅಧ್ಯಕ್ಷ ಅಮಿತ್‌ ಶಾರ ಮಗ ಸೇರಿದಂತೆ ಹಲವು ಸಚಿವರುಗಳ ಭ್ರಷ್ಟಾಚಾರದ ವಿಷಯದ ಬಗ್ಗೆ ನಾವು ಗಮನ ಸೆಳೆಯುತ್ತಿದ್ದರೂ, ಈ ವಿಷಯಗಳಲ್ಲಿ ಮೋದಿ ಯಾವಾಗಲೂ ಮೌನ ಕಾಪಾಡಿಕೊಂಡು ಬಂದಿದ್ದಾರೆ ಎಂದು ಪಕ್ಷದ ವಕ್ತಾರ ಆರ್‌.ಪಿ.ಎನ್‌. ಸಿಂಗ್‌ ಹೇಳಿದ್ದಾರೆ.

loader