ಇಟಾನಗರ್(ಡಿ.30): ಅರುಣಾಚಲಾ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪಕ್ಷದ ಅಧ್ಯಕ್ಷ ಕಾಫಿಯಾ ಬೆಂಗಿಯಾ ಪಕ್ಷದಿಂದ ಅಮಾನತು ಮಾಡಿದ್ದಾರೆ. ಸಿಎಂ ಪೇಮ ಖಂಡು ಜೊತೆಗೆ 6 ಶಾಸಕರನ್ನು ಅಮಾನತು ಮಾಡಲಾಗಿದೆ. ಕಾಂಗ್ರೆಸ್'ನ ಬಂಡಾಯ ನಾಯಕ ಪೇಮ ಖಂಡು 42 ಶಾಸಕರೊಂದಿಗೆ  ಸೆಪ್ಟೆಂಬರ್ ತಿಂಗಳಲ್ಲಿ ಪಿಪಿಎ ಪಕ್ಷಕ್ಕೆ ಸೇರ್ಪಡೆಗೊಂಡು ಮುಖ್ಯಮಂತ್ರಿಯಾಗಿದ್ದರು.'ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದ್ದು, ಪೇಮಾ ಖಂಡು ಹಾಗೂ  6 ಶಾಸಕರು ಪಿಪಿಎ ಪಕ್ಷದ ಯಾವುದೇ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಇನ್ನು ಕೆಲವು ದಿನಗಳಲ್ಲಿ ಶಾಸಕಾಂಗ ನಾಯಕನ ಸ್ಥಾನದಿಂದಲೂ ಬದಲಾಯಿಸಲಾಗಲಿದ್ದು, ಬೇರೆ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ' ಎಂದು ಪಿಪಿಎ ಪಕ್ಷದ ಅಧ್ಯಕ್ಷ ಕಾಫಿಯಾ ಬೆಂಗಿಯಾ ತಿಳಿಸಿದ್ದಾರೆ.ಆಗಸ್ಟ್'ನಲ್ಲಿ ಮಾಜಿ ಮುಖ್ಯಮಂತ್ರಿ ಖಲಿಕೊ ಪುಲ್ ಆತ್ಮಹತ್ಯೆ ಮಾಡಿಕೊಂಡ ಒಂದು ತಿಂಗಳ ನಂತರ ಖಂಡು ಪಿಪಿಎ'ಗೆ ಸೇರ್ಪಡೆಯಾಗಿ ಮುಖ್ಯಮಂತ್ರಿಯಾಗಿದ್ದರು.