ಬಜೆಟ್ ಸಂಪ್ರದಾಯ ಮುರಿಯುತ್ತಿರುವ ಅರುಣ್ ಜೇಟ್ಲಿ: ಈ ಬಾರಿ ಹಿಂದಿಯಲ್ಲಿ ಆಯವ್ಯಯ ಮಂಡನೆ

First Published 1, Feb 2018, 10:04 AM IST
Arun Jaitley to break tradition to deliver budget in Hindi
Highlights

ಸಾಮಾನ್ಯರಿಗೆ ಅರ್ಥವಾಗುವ ಭಾಷೆ ಹಿಂದಿಯಾದ ಕಾರಣ ಹಿಂದಿಯಲ್ಲಿ ಭಾಷಣ ಮಂಡಿಸಿಲಿದ್ದಾರಂತೆ. ಆದರೆ ದಕ್ಷಿಣ ಭಾರತದ ಮಂದಿಗೆ ಹಿಂದಿ ಇಂದಿಗೂ ಕಬ್ಬಿಣದ ಕಡಲೆಕಾಯಿ.

ನವದೆಹಲಿ(ಫೆ.01): ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಈ ಬಾರಿಯ ಆಯವ್ಯಯ ಮಂಡನೆಯಲ್ಲಿ ಹಲವು ಸಂಪ್ರದಾಯಗಳನ್ನು ಮುರಿಯುತ್ತಿದೆ.

ಇದೇ ಮೊದಲ ಬಾರಿಗೆ ಆಯವ್ಯಯ ಭಾಷಣವನ್ನು ಹಿಂದಿಯಲ್ಲಿ ಮಂಡಿಸಲಾಗುತ್ತದೆ. ಸ್ವತಂತ್ರ ನಂತರದಲ್ಲಿ ಪಟ್ಟು 37 ಮಂದಿ ಬಜೆಟ್ ಮಂಡಿಸಿದ್ದು ಇಲ್ಲಿಯವರೆಗೂ ಎಲ್ಲ ಅರ್ಥ ಸಚಿವರು ಆಂಗ್ಲ ಭಾಷೆಯಲ್ಲಿ ಆಯವ್ಯಯ ಮಂಡಿಸುತ್ತಿದ್ದರು. 2014ರಲ್ಲಿ ಅಸ್ತಿತ್ವಕ್ಕೆ ಬಂದ ಎನ್'ಡಿಎ ಸರ್ಕಾರದ ಅರ್ಥ ಸಚಿವ ಅರುಣ್ ಜೇಟ್ಲಿ ಕಳೆದ 4 ಬಜೆಟ್'ಗಳನ್ನು ಇಂಗ್ಲಿಷ್'ನಲ್ಲಿ ಮಂಡಿಸಿದ್ದಾರೆ.

ಈ ಬಾರಿ ಹಿಂದಿಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಸಾಮಾನ್ಯರಿಗೆ ಅರ್ಥವಾಗುವ ಭಾಷೆ ಹಿಂದಿಯಾದ ಕಾರಣ ಹಿಂದಿಯಲ್ಲಿ ಭಾಷಣ ಮಂಡಿಸಿಲಿದ್ದಾರಂತೆ. ಆದರೆ ದಕ್ಷಿಣ ಭಾರತದ ಮಂದಿಗೆ ಹಿಂದಿ ಇಂದಿಗೂ ಕಬ್ಬಿಣದ ಕಡಲೆಕಾಯಿ. ಇದರ ಜೊತೆ ಫೆಬ್ರವರಿ 1ರಂದು ಮಂಡನೆಯಾಗುತ್ತಿರುವುದು ಕೂಡ ನೂತನ ಸಂಪ್ರದಾಯ. ಹಲವು ವರ್ಷಗಳಿಂದ ಫೆಬ್ರವರಿ ಕೊನೆಯ ವಾರದಲ್ಲಿ ಮಂಡಿಸಲಾಗುತ್ತಿತ್ತು.

ಕಳೆದ ವರ್ಷ ರೈಲ್ವೆ ಬಜೆಟ್ ಅನ್ನು ಹಣಕಾಸು ಆಯವ್ಯಯಕ್ಕೆ ಸೇರಿಸಲಾಗಿತ್ತು. ಜಿಎಸ್'ಟಿ ಜಾರಿಯ ನಂತರ ಮಂಡನೆಯಾಗುತ್ತಿರುವ ಮೊದಲ ಆಯವ್ಯಯ ಕೂಡ ಇದಾಗಿದೆ.                         

loader