ಎಚ್‌ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ಮೇಕ್ ಇನ್ ಇಂಡಿಯಾಗೆ ಗರಿ ಮೂಡಿಸಿರುವ ಹೆಮ್ಮೆಯ ಯುದ್ದ ವಿಮಾನಕ್ಕೆ ಚಾಲನೆ ನೀಡಿದರು.
ಬೆಂಗಳೂರು(ಆ.26): ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ ನಿರ್ಮಾಣಕ್ಕೆ ಚಾಲನೆ ಹಾಗೂ ಸ್ವದೇಶಿ ಉತ್ರನ್ನಗಳಿಂದಲೇ ಉನ್ನತೀಕರಿಸಿದ ಹಾಕ್- ಐ (ಹಾಕ್- ಇಂಡಿಯಾ) ಯುದ್ದ ವಿಮಾನವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಲೋಕಾರ್ಪಣೆ ಮಾಡಿದರು.
ಎಚ್ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ಮೇಕ್ ಇನ್ ಇಂಡಿಯಾಗೆ ಗರಿ ಮೂಡಿಸಿರುವ ಹೆಮ್ಮೆಯ ಯುದ್ದ ವಿಮಾನಕ್ಕೆ ಚಾಲನೆ ನೀಡಿದರು. ಇವತ್ತಿನ ದಿನ ನನಗೆ ಬಹಳ ತೃಪ್ತಿಯ ಹಾಗೂ ವೈಯಕ್ತಿಕವಾಗಿ ಬಹಳಷ್ಟು ತಿಳುವಳಿಕೆ ಪಡೆದ ಸಂತಸದ ದಿನ. ಭಾರತ ಯುದ್ಧೋಪಕರಣಗಳನ್ನ ವಿದೇಶಗಳ ಕಂಪನಿಗಳಿಂದ ಹಾಗೂ ವಿದೇಶಿ ಸರ್ಕಾರಗಳಡಿಯಲ್ಲಿರುವ ಕಂಪನಿಗಳಿಂದ ಖರೀದಿಸುತ್ತಾ ಬಂದಿದೆ. ಆದರೆ ಈಗ ಸ್ವಯಂ ಯುದ್ಧೋಪಕರಣಗಳ ನಿರ್ಮಾಣ ಹಾಗೂ ಹೊರದೇಶಗಳಿಗೂ ಭಾರತವೇ ಉತ್ಪಾದನೆ ಮಾಡಿ ನೀಡುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ ಎಂದು ಹೇಳಿದರು.
