ನಗದು ರಹಿತ ವಹಿವಾಟಿಗೆ ಹೆಚ್ಚು ಒತ್ತು ನೀಡಲಾಗಿದೆ, 4.5 ಕೋಟಿ ಗ್ರಾಹಕರು ಪೆಟ್ರೋಲ್, ಡೀಸೆಲ್ ಖರೀದಿಸುತ್ತಿದ್ದಾರೆ. ಇದರಲ್ಲಿ ಶೇ. 20ರಿಂದ 40ರಷ್ಟು ಗ್ರಾಹಕರಿಂದ ಕಾರ್ಡ್ ಬಳಸಿ ಇಂಧನ ತುಂಬಿಸಿಕೊಳ್ಳುತ್ತಿದ್ಧಾರೆ. ಕಾರ್ಡ್ ಬಳಸಿ ಇಂಧನ ತುಂಬಿಸಿಕೊಂಡರೆ ಪೆಟ್ರೋಲ್ ದರದಲ್ಲಿ ಶೇ. 0.75ರಷ್ಟು ವಿನಾಯಿತಿ, ರೈಲ್ವೆಯಲ್ಲಿ ಟಿಕೆಟ್ ಖರೀದಿಸಿದರೆ ಶೇ.0.5ರಷ್ಟು ರಿಯಾಯಿತಿ, ಆನ್`ಲೈನ್`ನಲ್ಲಿ ರೈಲ್ವೆ ಟಿಕೆಟ್ ಖರೀದಿಸಿದರೆ 10 ಲಕ್ಷ ವಿಮೆಯನ್ನ ನೀಡಲಾಗುತ್ತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ಧಾರೆ. ಇದೇವೇಳೆ, ಹೆದ್ದಾರಿಗಳಲ್ಲಿ ಆನ್`ಲೈನ್ ಟೋಲ್ ಶುಲ್ಕ ಪಾವತಿಗೆ ಆದ್ಯತೆ ನೀಡಲಾಗಿದ್ದು, ಆನ್ಲೈನ್ ಮೂಲಕ ಟೋಲ್ ಕಟ್ಟಿದರೆ ಶೇ.10ರಷ್ಟು ವಿನಾಯಿತಿ. ಆನ್`ಲೈನ್`ನಲ್ಲಿ ಎಲ್`ಐಸಿ ಕಟ್ಟಿದರೆ ಶೇ.8-10ರಷ್ಟು ವಿನಾಯಿತಿ ಸಿಗಲಿದೆ ಎಂದಿದ್ದಾರೆ.
ನವದೆಹಲಿ(ಡಿ.08): ನೋಟ್ ಬ್ಯಾನ್ನಿಂದ ಆನ್ ಲೈನ್ ವ್ಯವಹಾರ ಹೆಚ್ಚಾಗಿದೆ, ನೋಟ್ ಬ್ಯಾನ್ ಮಾಡಿದಕ್ಕೆ ದೇಶದ ಜನತೆಯ ಬೆಂಬಲ ಸಿಕ್ಕಿದೆ ಎಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.