ಕನ್ನಡ ಚಿತ್ರರಂಗದ ಖ್ಯಾತನಾಮರಾದ ಎಸ್ ನಾರಾಯಣ್, ಕ್ರೇಜಿಸ್ಟಾರ್​ ರವಿಚಂದ್ರನ್, ದಿನೇಶಬಾಬು, ರಾಜೇಂದ್ರಸಿಂಗ್​ ಬಾಬು, ಓಂ ಸಾಯಿಪ್ರಕಾಶ್​, ಸೇರಿದಂತೆ ಅನೇಕರ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದರು.

ಧಾರವಾಡ (ಡಿ.27): ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಸುಭಾಷ್​ ಕಡಕೋಳ ಇಂದು ಧಾರವಾಡದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

61 ವರ್ಷದ ಸುಭಾಷ್​ ಅವರು, ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದವರಾದ ಸುಭಾಷ್​ 35 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

ಕನ್ನಡ ಚಿತ್ರರಂಗದ ಖ್ಯಾತನಾಮರಾದ ಎಸ್ ನಾರಾಯಣ್, ಕ್ರೇಜಿಸ್ಟಾರ್​ ರವಿಚಂದ್ರನ್, ದಿನೇಶಬಾಬು, ರಾಜೇಂದ್ರಸಿಂಗ್​ ಬಾಬು, ಓಂ ಸಾಯಿಪ್ರಕಾಶ್​, ಸೇರಿದಂತೆ ಅನೇಕರ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದರು.

ಕನ್ನಡದ ಖ್ಯಾತ ಚಿತ್ರಗಳಾದ ನಮ್ಮೂರ ಮಂದಾರ ಹೂವೇ, ಗೋಪಿ, ನೀಲಕಂಠ, ದುರ್ಗಾಶಕ್ತಿ, ಮೋಹಿನಿ, ಹೊಸರಾಗ, ಮೊಗ್ಗಿನ ಮನಸ್ಸು, ಹಿಮಪಾತ, ಪುಟ್ನಂಜ ಸೇರಿದಂತೆ ಇತರೆ ಹೆಸರಾಂತ ಚಿತ್ರಗಳಿಗೂ ಸುಭಾಷ್​ ಕಲಾ ನಿರ್ದೇಶಕರಾಗಿ ದುಡಿದಿದ್ದರು.