Asianet Suvarna News Asianet Suvarna News

ಜನಶಕ್ತಿಯ ಮುಂದೆ ದುರಹಂಕಾರಿ ನಾಯಕರು ತಲೆ ಬಾಗಿದ್ದಾರೆ; ಮೋದಿ ವಿರುದ್ಧ ಠಾಕ್ರೆ ವ್ಯಂಗ್ಯ

ಶಿವಸೇನೆ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿವಸೇನೆ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್’ಟಿ) ಯನ್ನು ನಾವು ಸುಧಾರಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯ ವಿರುದ್ಧ ಶಿವಸೇನೆ ತಿರುಗಿ ಬಿದ್ದಿದೆ. ಜನಶಕ್ತಿಯ ಮುಂದೆ ದುರಹಂಕಾರಿ ನಾಯಕರು ಅಸಹಾಯಕರಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಬಲವಂತವಾಗಿ ಜಿಎಸ್;ಟಿ ದರವನ್ನು ಬದಲಾಯಿಸಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

Arrogant Rulers Became Helpless Before Might of People  Says Uddhav Thackeray on GST Relief

ನವದೆಹಲಿ (ಅ.07): ಶಿವಸೇನೆ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿವಸೇನೆ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್’ಟಿ) ಯನ್ನು ನಾವು ಸುಧಾರಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯ ವಿರುದ್ಧ ಶಿವಸೇನೆ ತಿರುಗಿ ಬಿದ್ದಿದೆ. ಜನಶಕ್ತಿಯ ಮುಂದೆ ದುರಹಂಕಾರಿ ನಾಯಕರು ಅಸಹಾಯಕರಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಬಲವಂತವಾಗಿ ಜಿಎಸ್;ಟಿ ದರವನ್ನು ಬದಲಾಯಿಸಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಜನಶಕ್ತಿಯ ಮುಂದೆ ಈ ದುರಹಂಕಾರಿ ನಾಯಕರು ತಲೆ ಬಾಗಿದ್ದಾರೆ. ಸರ್ಕಾರದ ನೀತಿಗಳಿಂದ  ಜನರ ಮನಸ್ಸಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ ಎಂದು ಗೊತ್ತಾದಾಗ ಸರ್ಕಾರ ಅಸಹಾಯಕವಾಗಿದೆ.  ಜಿಎಸ್’ಟಿ ಕಡಿತದ ನಂತರ ಸರ್ಕಾರ ಜನ ಸಾಮಾನ್ಯರಿಗಾಗಿ ಏನಾದರೂ ಮಾಡಲೇಬೇಕು. ಹಣದುಬ್ಬರವನ್ನು ಕಡಿಮೆ ಮಾಡುವುದು, ಇಂಧನ ಬೆಲೆ ಇಳಿಕೆ, ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಜಿಎಸ್’ಟಿಗೆ ರಿಲೀಫ್ ನೀಡಿ ದೀಪಾವಳಿ ಗಿಫ್ಟ್ ಎನ್ನುವ ರೀತಿಯಲ್ಲಿ ಮೊದಿ ಬಿಂಬಿಸುತ್ತಿದ್ದಾರೆ. ಜನರ ಮೇಲೆ ಮೇಲಿಂದ ಮೇಲೆ ಸಾಕಷ್ಟು ತೆರಿಗೆಗಳನ್ನು ವಿಧಿಸಿ, ಜನರಲ್ಲಿರುವ ಹಣವನ್ನು ಸರ್ಕಾರ ಲೂಟಿ ಮಾಡಿದೆ. ಹಾಗಾಗಿ ಈ ಬಾರಿ ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಮಾಡಲು ಜನರ ಬಳಿ ಹಣವಿಲ್ಲ ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

Follow Us:
Download App:
  • android
  • ios