ಮೆಟ್ರೋ ರೈಲಿನಲ್ಲಿ ರಾತ್ರಿ ಕೊನೆಯದಾಗಿ ಪ್ರಯಾಣಿಸುವವರು ರೈಲು ಬಿಡುವ ಹತ್ತು ನಿಮಿಷಗಳ ಮುನ್ನವೇ ನಿಲ್ದಾಣ ತಲುಪಬೇಕು, 10 ನಿಮಿಷಕ್ಕೂ ಮುನ್ನ ನಿಲ್ದಾಣದ ಎಲ್ಲಾ ಪ್ರವೇಶ ದ್ವಾರ ಮುಚ್ಚುವುದಾಗಿ ನಮ್ಮ ಮೆಟ್ರೋ ರೈಲು ನಿಗಮ ತಿಳಿಸಿದೆ.

ಬೆಂಗಳೂರು(ಆ.21): ಮೆಟ್ರೋ ರೈಲಿನಲ್ಲಿ ರಾತ್ರಿ ಕೊನೆಯದಾಗಿ ಪ್ರಯಾಣಿಸುವವರು ರೈಲು ಬಿಡುವ ಹತ್ತು ನಿಮಿಷಗಳ ಮುನ್ನವೇ ನಿಲ್ದಾಣ ತಲುಪಬೇಕು, 10 ನಿಮಿಷಕ್ಕೂ ಮುನ್ನ ನಿಲ್ದಾಣದ ಎಲ್ಲಾ ಪ್ರವೇಶ ದ್ವಾರ ಮುಚ್ಚುವುದಾಗಿ ನಮ್ಮ ಮೆಟ್ರೋ ರೈಲು ನಿಗಮ ತಿಳಿಸಿದೆ.

ಮೆಜೆಸ್ಟಿಕ್‌'ನ ನಿಲ್ದಾಣದಿಂದ ಮಾತ್ರ ಕೊನೆ ರೈಲುಗಳು ನೇರಳೆ (ಬೈಯ್ಯಪ್ಪನಹಳ್ಳಿ- ನಾಯಂಡಹಳ್ಳಿ) ಮತ್ತು ಹಸಿರು (ಯಲಚೇನ ಹಳ್ಳಿ- ನಾಗಸಂದ್ರ) ಮಾರ್ಗಗಳಲ್ಲಿ ರಾತ್ರಿ 11.25ಕ್ಕೆ ಲಭ್ಯವಿದೆ. ಉಳಿದ ಕಡೆ ಮೆಟ್ರೋ ರೈಲು ಸೇವೆ ಇದೀಗ ರಾತ್ರಿ 11 ಗಂಟೆವರೆಗೆ ಮಾತ್ರ ಲಭ್ಯವಿದೆ. ಆದರೆ ಈ ರೈಲುಗಳಲ್ಲಿ ಪ್ರಯಾಣಿಸುವವರು ರಾತ್ರಿ 10.50 ಮತ್ತು ರಾತ್ರಿ 11.15 ರೊಳಗಾಗಿ ನಿಲ್ದಾಣದೊಳಕ್ಕೆ ಪ್ರವೇಶಿಸುವುದು ಕಡ್ಡಾಯ. ನಂತರ ಬಂದವರಿಗೆ ನಿಲ್ದಾಣ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲವೆಂದು ಮೆಟ್ರೋ ಸ್ಪಷ್ಟಪಡಿಸಿದೆ.

ಬೆಳಗ್ಗೆಯೂ ಮೆಟ್ರೋ ರೈಲುಗಳು 5 ಗಂಟೆಗೆ ಆರಂಭಗೊಳ್ಳಲಿದ್ದು 10 ನಿಮಿಷ ಮುನ್ನ ಮಾತ್ರ ರೈಲ್ವೇ ನಿಲ್ದಾಣ ಪ್ರವೇಶಿಸ ಬಹುದಾಗಿದೆ. ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ, ಮೈಸೂರು ರಸ್ತೆ, ಹಸಿರು ಮಾರ್ಗದ ಯಲಚೇನಹಳ್ಳಿ ಹಾಗೂ ನಾಗಸಂದ್ರಗಳಿಂದ ಬೆಳಗ್ಗೆ 5 ಗಂಟೆಗೆ ಮೊದಲ ರೈಲು ಹೊರಡಲಿದೆ. ಆದರೆ ಈ ರೈಲುಗಳ ಚಾಲಕರ (ಪೈಲಟ್) ಪ್ರಯಾಣದ ರೈಲುಗಳಾಗಿದ್ದು ಉಳಿದ ಪ್ರಯಾಣಿಕರಿಗೂ ಈ ಪ್ರಯಾಣಕ್ಕೆ ಅವಕಾಶವಿದೆ. ಆದರೆ ಈ ರೈಲುಗಳು ನಿಧಾನವಾಗಿ ಸಂಚರಿಸಲಿದ್ದು ಮುಂದಿನ ರೈಲುಗಳು ಮಾತ್ರ ನಿಗದಿತ ವೇಗದಲ್ಲಿ ಸಂಚರಿಸಲಿವೆ.

ರಾತ್ರಿ ಬೈಯ್ಯಪ್ಪನಹಳ್ಳಿ, ಮೈಸೂರು ರಸ್ತೆ ಹಾಗೂ ಯಲಚೇನಹಳ್ಳಿಗಳಿಂದ ಕೊನೆಯ ರೈಲು 11 ಗಂಟೆಗೆ ಪ್ರಯಾಣ ಆರಂಭಿಸಲಿದ್ದರೆ, ನಾಗಸಂದ್ರ ನಿಲ್ದಾಣದಿಂದ ಮಾತ್ರ ಕೊನೆಯ ರೈಲು 10.50ಕ್ಕೆ ಬಿಡಲಿದೆ. ಮೆಜೆಸ್ಟಿ'ಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಮಾತ್ರ ಮೆಟ್ರೋ ರೈಲುಗಳು ಸಂಚರಿಸುವ ನಾಲ್ಕೂ ದಿಕ್ಕುಗಳಿಗೂ (ಪೂರ್ವದ ಬೈಯ್ಯಪ್ಪ ನಹಳ್ಳಿ, ಪಶ್ಚಿಮದ ಮೈಸೂರು ರಸ್ತೆ, ಉತ್ತರದ ನಾಗಸಂದ್ರ, ದಕ್ಷಿಣದ ಯಲಚೇನಹಳ್ಳಿಗಳಿಗೆ ಕೊನೆಯ ರೈಲು ರಾತ್ರಿ 11.25ಕ್ಕೆ ಬಿಡಲಿದೆ. ಆದರೆ ಪ್ರಯಾಣಿಕರು 11.15ರೊಳಗಾಗಿ ಕೆಂಪೇಗೌಡ ನಿಲ್ದಾಣ ಪ್ರವೇಶಿಸಬೇಕಿದೆ. ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾ ಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ರೈಲುಗಳ ಹೆಚ್ಚಳ:

ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ ರೈಲುಗಳ ಸಂಖ್ಯೆಯ ಜತೆಗೆ ರೈಲು ಗಳ ಸಂಚಾರದ ನಡುವಿನ ಅಂತರ(ಫ್ರೀಕ್ವೆನ್ಸಿ) ಹೆಚ್ಚಳಕ್ಕೂ ಮೆಟ್ರೋ ನಿಗಮ ನಿರ್ಧಸಿದೆ. ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ನಿಗಮವು ದಿನವಿಡೀ ರೈಲುಗಳು ನಗರದ ನಾಲ್ಕು ದಿಕ್ಕುಗಳಿಂದ ಆರಂ‘ಗೊಳ್ಳುವ ವೇಳಾಪಟ್ಟಿ ಪ್ರಕಟಿಸಿದೆ. ಮುಂದಿನ ನಿಲ್ದಾಣಗಳಿಗೆ ರೈಲು ತಲುಪುವ ಸಮಯವು ಈ ನಾಲ್ಕು ದಿಕ್ಕುಗಳಿಂದ ರೈಲು ಗಳು ಹೊರಡುವ ಸಮಯಕ್ಕೆ ಅನ್ವಯವಾಗಿ ರುತ್ತದೆ. ಹಾಗೂ ಪ್ರಯಾಣಿಕರ ದಟ್ಟಣೆ ವೇಳೆ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸ ಲಾಗುವುದು ಎಂದು ಮೆಟ್ರೋ ತಿಳಿಸಿದೆ.

ಬೆಳಗ್ಗೆ 5.30ರಿಂದ ವಾಣಿಜ್ಯ ಸೇವೆ ಆರಂಭ ಗೊಳ್ಳಲಿದ್ದು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಬೆಳಗ್ಗೆ 5.30ರವರೆಗೆ ಪ್ರತಿ 15, 10 ಹಾಗೂ 7, 5 ನಿಮಿಷಕ್ಕೊಂದರಂತೆ ರೈಲು ಲಭ್ಯವಾಗಲಿದೆ. ಪ್ರಯಾಣಿಕರ ದಟ್ಟಣೆ ಸಂದರ್ಭದಲ್ಲಿ 2 ರೈಲುಗಳ ನಡುವಿನ ಅಂತರ 4 ನಿಮಿಷಕ್ಕೊಂದರಂತೆ ಹೆಚ್ಚಿಸಲಾಗುವುದು