ಸಲ್ಮಾನ್ ಖಾನ್ ಕೊಲೆಗೆ ಸಂಚು ರೂಪಿಸಿದ್ದ ಪಾತಕಿಹೈದರಾಬಾದ್ ನಲ್ಲಿ ಬಂಧಿತನಾದ ಶಾರ್ಪ್ ಶೂಟರ್ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಪತ್ ನೆಹ್ರಾಸಲ್ಮಾನ್ ಮನೆಯ ಫೋಟೋ ಸಂಗ್ರಹಿಸಿದ್ದ ನೆಹ್ರಾ
ನವದೆಹಲಿ(ಜೂ.10): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಶಾರ್ಪ್ ಶೂಟರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜೂ. 6ರಂದು ಹರಿಯಾಣ ಪೊಲೀಸರು ಹೈದರಾಬಾದ್ನಲ್ಲಿ ಬಂಧಿಸಿದ್ದ ವಾಂಟೆಡ್ ಶಾರ್ಪ್ ಶೂಟರ್ ಸಂಪತ್ ನೆಹ್ರಾ, ತಾನು ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಯೋಜಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
28 ವರ್ಷದ ಪಾತಕಿ ನೆಹ್ರಾ, ಸಲ್ಮಾನ್ ಹತ್ಯೆಗೆ ಸಂಚು ರೂಪಿಸಲು ಮುಂಬೈಗೆ ತೆರಳಿದ್ದ. ಅಲ್ಲದೇ ಸಲ್ಮಾನ್ ಅವರ ಮನೆಯ ಫೋಟೋ ಕೂಡ ಕ್ಲಿಕ್ಕಿಸಿದ್ದ. ಕೃಷ್ಣಮೃಗ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜನವರಿಯಲ್ಲಿ ಲಾರೆನ್ಸ್ ಬಿಷ್ಣಾಯ್ ಸಲ್ಮಾನ್ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಬಂಧಿತ ನೆಹ್ರಾ, ಲಾರೆನ್ಸ್ ಬಿಷ್ಣಾಯ್ ಗುಂಪಿನಲ್ಲಿ ಶಾರ್ಪ್ ಶೂಟರ್ ಆಗಿ ಕೆಲಸ ಮಾಡಿದ್ದ. ನೆಹ್ರಾ ತನ್ನ ಹತ್ಯೆ ಯೋಜನೆಯನ್ನು ಕಾರ್ಯರೂಪಗೊಳಿಸಿ ಹೊರದೇಶಕ್ಕೆ ಹೋಗುವ ಯೋಜನೆ ರೂಪಿಸಿದ್ದ. ಅದೇ ಕಾರಣಕ್ಕೆ ಮುಂಬೈಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
