ಮುಂಬೈ(ನ.1): ಭಾರತದ ಪ್ರಮುಖ ಆಂಗ್ಲ ನ್ಯೂಸ್ ಚಾನೆಲ್ 'ಟೈಮ್ಸ್ ನೌ' ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ತಮ್ಮ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಾಧ್ಯಮದ ವರದಿಗಳು ಹಾಗೂ ಟ್ವಿಟರ್ ಪೋಸ್ಟ್'ಗಳ ಪ್ರಕಾರ ಗೋಸ್ವಾಮಿ ಅವರು ಇಂದು 9 ಗಂಟೆಗೆ ನಡೆಯುವ ಚರ್ಚೆಯೆ ಅವರ ಕೊನೆಯ ಚರ್ಚೆಯಾಗಿರಲಿದೆ. ಆದ್ಯಾಗಿಯೂ ದಿ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆ ರಾಜೀನಾಮೆ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಬಿಟ್ಟಿಲ್ಲ.

ಇಂಡಿಯನ್ ಎಕ್ಸ್'ಪ್ರೆಸ್ ವರದಿಯ ಪ್ರಕಾರ ಗೋಸ್ವಾಮಿ ಅವರು ಮುಂಬೈ'ನಲ್ಲಿ ನಡೆದ ಸಂಪಾದಕೀಯ, ಬ್ಯೂರೊ ಮುಖ್ಯಸ್ಥರ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ತಮ್ಮ ಪ್ರೈಮ್ ಟೈಮ್'ನ ಚರ್ಚೆಯಲ್ಲಿ ಗಣ್ಯರೊಂದಿಗೆ ಅತೀ ದೀರ್ಘ ಕಾಲದ ಚರ್ಚೆಯಲ್ಲಿ ತೊಡಗಿಸಿಕೊಂಡು ಪ್ರಖ್ಯಾತರಾಗಿದ್ದರು.

ಕ್ವೀನ್ಟ್ ವರದಿಯ ಪ್ರಕಾರ ಅರ್ನಾಬ್ ಅವರು ಕೆಲ ದಿನಗಳಲ್ಲಿ ಸ್ವತಂತ್ರವಾಗಿ ಚಾನೆಲ್ ತೆರೆಯಲಿದ್ದಾರಂತೆ. ಅವರ ಜೊತೆ ಟೈಮ್ಸ್ ನೌದ ಹಲವು ಸಿಬ್ಬಂದಿಗಳು ಹೊರಗೊಗಲಿದ್ದಾರೆ. ವಿಶ್ವದ ಅತೀ ದೊಡ್ಡ ಚಾನೆಲ್ ಮಾಡುವ ಉದ್ದೇಶ ಹೊಂದಿದ್ದಾರಂತೆ.