ಭಾರತೀಯ ಸೇನೆಯಲ್ಲಿ 30 ವರ್ಷ ದೀರ್ಘಕಾಲೀನ ಸೇವೆ ಸಲ್ಲಿಸಿದ ನಿವೃತ್ತ ಸೇನಾಧಿಕಾರಿ ವಿರುದ್ಧ ಅಕ್ರಮ ಬಾಂಗ್ಲಾದೇಶಿ ವಲಸಿಗ ಎಂಬ ಆರೋಪ ಹೊರಿಸಲಾಗಿದೆ.
ಗುವಾಹಟಿ(ಅ.02): ಭಾರತೀಯ ಸೇನೆಯಲ್ಲಿ 30 ವರ್ಷ ದೀರ್ಘಕಾಲೀನ ಸೇವೆ ಸಲ್ಲಿಸಿದ ನಿವೃತ್ತ ಸೇನಾಧಿಕಾರಿ ವಿರುದ್ಧ ಅಕ್ರಮ ಬಾಂಗ್ಲಾದೇಶಿ ವಲಸಿಗ ಎಂಬ ಆರೋಪ ಹೊರಿಸಲಾಗಿದೆ.
ಅಲ್ಲದೆ, ನಿವೃತ್ತ ಯೋಧನ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತಾದ ವಿಚಾರಣೆಯನ್ನು ವಿದೇಶಿಗರ ನ್ಯಾಯಾಧೀಕರಣ ಅ.13ರಂದು ನಿಗದಿಗೊಳಿಸಿದೆ. ಅಕ್ರಮ ವಲಸಿಗ ಎಂಬ ಆರೋ ಪದ ಹಣೆಪಟ್ಟಿಯನ್ನು ಹೊತ್ತ ಯೋಧನನ್ನು, ಜೂನಿಯರ್ ಸೇನಾಧಿ ಕಾರಿ ಹುದ್ದೆಯಿಂದ ಕಳೆದ ವರ್ಷವಷ್ಟೇ ನಿವೃತ್ತರಾದ ಮೊಹಮ್ಮದ್ ಅಜ್ಮಲ್ ಹಕ್ ಎಂದು ಗುರುತಿಸ ಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಜ್ಮಲ್ ಹಕ್, ‘ನನ್ನನ್ನು ಅಕ್ರಮ ವಲಸಿಗ ಎಂಬ ಆರೋಪದಿಂದ ನನ್ನ ಹೃದಯವೇ ಒಡೆದು ಹೋಯಿತು. ಈ ಬಗ್ಗೆ ನಾನು ಸಾಕಷ್ಟು ನೊಂದಿದ್ದೇನೆ. 30 ವರ್ಷಗಳ ಸೇವೆಯ ನಿವೃತ್ತಿ ಬಳಿಕ ಇಂಥ ಅವಮಾನ ಎದುರಿಸುತ್ತಿದ್ದೇನೆ. ಇದು ನಿಜಕ್ಕೂ ಬೇಸರದ ಸಂಗತಿ,’ ಎಂದಿದ್ದಾರೆ. ನಾನು ಒಂದು ವೇಳೆ ಅಕ್ರಮ ಬಾಂಗ್ಲಾದೇಶಿಗನಾಗಿದ್ದರೆ, ನಾನು ಭಾರತದ ಸೇನೆಗೆ ಹೇಗೆ ಸೇವೆ ಸಲ್ಲಿಸುತ್ತಿದ್ದೆ ಎಂದವರು ಪ್ರಶ್ನಿಸಿದ್ದಾರೆ.
ಸೇನೆಗೆ ಸೇರುವ ಪ್ರತಿಯೊಬ್ಬರ ಕುರಿತು ಪೊಲೀಸರ ಪರಿಶೀಲನೆ ಕಡ್ಡಾಯವಾಗಿದ್ದು, ಈ ನಿಯಮ ಅಜ್ಮಲ್ ಹಕ್ ಪ್ರಕರಣದಲ್ಲೂ ಪಾಲನೆಯಾಗಿದೆ. 2002ರಲ್ಲೂ ಸೇನಾನಿ ಪತ್ನಿ ಮಮ್ತಾಜ್ ಬೇಗಂ ವಿರುದ್ಧವೂ ಇಂಥದ್ದೇ ಆರೋಪ ಹೊರಿಸಲಾಗಿತ್ತು. ಆದರೆ, ತಾವು ಭಾರತೀಯರು ಎಂಬು ದನ್ನು ಸಾಬೀತುಪಡಿಸುವ ದಾಖಲೆಗಳನ್ನು ದಂಪತಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಮಮ್ತಾಜ್‌ಳನ್ನು ‘ಾರ ತೀಯ ಮಹಿಳೆ ಎಂದು ಒಪ್ಪಿಕೊಳ್ಳಲಾಗಿತ್ತು.
