ಪುಲ್ವಾಮಾ(ಜೂ.17): CRPFನ ಧೀರ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯ ಕರಾಳ ನೆನಪು ಮಾಸುವ ಮುನ್ನವೇ, ಪುಲ್ವಾಮಾದಲ್ಲಿ ಮತ್ತೊಮ್ಮೆ ಭದ್ರತಾಪಡೆಗಳ ಮೇಲೆ ಉಗ್ರ ದಾಳಿ ನಡೆದಿದೆ.

ಭದ್ರತಾಪಡೆಗಳ ವಾಹನದ ಮೇಲೆ ಸುಧಾರಿತ ಸ್ಫೋಟಕ (IED) ಬಳಸಿ ದಾಳಿಗೆ ಯತ್ನ ನಡೆದಿದೆ. ಆದರೆ ದಾಳಿಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.

ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯ ಮೇಲೆ ಉಗ್ರರು ದಾಳಿ ನಡೆಸಿದ್ದು, ಸೇನೆ ಕೂಡ ಪ್ರತಿದಾಳಿಗೆ ಸಜ್ಜಾಗಿ ಕಾರ್ಯಾಚರಣೆ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.