ನವದೆಹಲಿ(ಆ.02): ಗಡಿ ನಿಯಂತ್ರಣ ರೇಖೆ ದಾಟಿ ಸರ್ಜಿಕಲ್ ದಾಳಿಯ ಮೂಲಕ ಉಗ್ರರನ್ನು ಹೊಡೆದುರುಳಿದ ನಮ್ಮ ಸೈನ್ಯದ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಗೃಹ ಸಚಿವ ರಾಜ್'ನಾಥ್ ಸಿಂಗ್ ಹೇಳಿದ್ದಾರೆ.
ಭಾರತ ಮಾತ್ರವಲ್ಲ ಇಡೀ ಜಗತ್ತಿನೆದುರು ತಮ್ಮ ಸಾಮರ್ಥ್ಯವನ್ನು ಅನಾವರಣ ಮಾಡಿದ ನಮ್ಮ ಸೈನಿಕರ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.
ಸರ್ಜಿಕಲ್ ದಾಳಿಯ ಕುರಿತಂತೆ ಭಾರತ ಯಾವುದೇ ದಾಖಲೆ ಬಿಡುಗಡೆಗೊಳಿಸದಿರುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ 'ಕಾದು ನೋಡಿ' ಎಂದಷ್ಟೇ ಉತ್ತರಿಸದ್ದಾರೆ.
