ನ್ಯೂಸ್ ವೆಬ್ ಸೈಟ್ ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕಂಡು ಬಂದಿದ್ದ ಸೈನಿಕನೊಬ್ಬನ ದೇಹ ಮಹಾರಾಷ್ಟ್ರದ ಡಿಯೋಲಾಲಿ ಕಂಟೋನ್ಮೆಂಟಿನ ಕೋಣೆಯೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೊಲ್ಲಂ (ಮಾ.03): ನ್ಯೂಸ್ ವೆಬ್ ಸೈಟ್ ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕಂಡು ಬಂದಿದ್ದ ಸೈನಿಕನೊಬ್ಬನ ದೇಹ ಮಹಾರಾಷ್ಟ್ರದ ಡಿಯೋಲಾಲಿ ಕಂಟೋನ್ಮೆಂಟಿನ ಕೋಣೆಯೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

33 ವರ್ಷದ ಲ್ಯಾನ್ಸ್ ನಾಯ್ಕ್ ಮ್ಯಾಥ್ಯೂ ರಾಯ್ ಮೃತಪಟ್ಟ ಸೈನಿಕ. ದೇಹ ಕೊಳೆತಿರುವ ಸ್ಥಿತಿಯಲ್ಲಿದ್ದು 3 ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ವೈದ್ಯರು ಹೇಳಿದ್ದಾರೆ.

ಸೇನೆಯಲ್ಲಿ 13 ವರ್ಷಗಳಿಂದ ಮ್ಯಾಥ್ಯೂ ಸೇವೆ ಸಲ್ಲಿಸುತ್ತಿದ್ದರು. ಸೇನಾಧಿಕಾರಿಗಳ ಸಾಕುನಾಯಿಯೊಂದಿಗೆ ವಾಕಿಂಗ್ ಮಾಡುತ್ತಿರುವುದು ಮತ್ತು ಅವರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. ಇದು ಬ್ರಿಟಿಷರ ಕಾಲದ ಸಹಾಯಕ ಪದ್ದತಿಯನ್ನು ಪ್ರತಿನಿಧಿಸುವಂತಿದೆ ಎನ್ನಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾದ ನಂತರ ಇವರು ವಿಚಾರಣೆಯನ್ನು ಎದುರಿಸಿದ್ದರು. ಫೆ.25 ರ ನಂತರ ನಾಪತ್ತೆಯಾಗಿದ್ದರು.