Asianet Suvarna News Asianet Suvarna News

ಹಾಂಕಾಂಗ್‌ ಪ್ರಕ್ಷುಬ್ಧ: ಗಡಿಗೆ ಬಂತು ಚೀನಾ ಸೇನೆ

ಹಾಂಕಾಂಗ್‌ ಪ್ರಕ್ಷುಬ್ಧ: ಗಡಿಗೆ ಬಂತು ಚೀನಾ ಸೇನೆ| ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಹೋರಾಟ ತೀವ್ರ| ಬೀದಿಗಿಳಿದ ಸರ್ಕಾರದ ಪರ- ವಿರೋಧಿ ಪ್ರತಿಭಟನಾಕಾರರು|ಯುದ್ಧ ಭೂಮಿಯಂತಾದ ಹಾಂಗ್‌ಕಾಂಗ್‌ ರಸ್ತೆಗಳು| ಇಂದು 10 ಲಕ್ಷ ಪ್ರತಿಭಟನಾಕಾರರು ಬೀದಿಗಿಳಿಯುವ ನಿರೀಕ್ಷೆ

Armoured Vehicles Thousands Of Chinese Soldiers Reach Hong Kong Border
Author
Bangalore, First Published Aug 18, 2019, 7:51 AM IST
  • Facebook
  • Twitter
  • Whatsapp

ಹಾಂಕಾಂಗ್‌[ಆ.18]: ಚೀನಾ ಸ್ವಾಮ್ಯದ ಸ್ವಾಯತ್ತ ಪ್ರದೇಶ ಹಾಂಕಾಂಗ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಹೋರಾಟ ವಾರಾಂತ್ಯದ ದಿನವಾದ ಶನಿವಾರ ಮತ್ತಷ್ಟುತೀವ್ರ ಸ್ವರೂಪ ಪಡೆದಿದೆ. ಹಾಂಕಾಂಗ್‌ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದು ಭಯೋತ್ಪಾದನೆಗೆ ಸಮ ಎಂದು ಸರ್ಕಾರ ಹೇಳಿದ್ದರಿಂದ ಆಕ್ರೋಶಗೊಂಡ ಹೋರಾಟಗಾರರು, ಶನಿವಾರ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ.

ಈ ಮಧ್ಯೆ ಸರ್ಕಾರದ ಪರ ಹೋರಾಟಗಾರರು ಕೂಡ ಬೀದಿಗಿಳಿದಿದ್ದು ಚೀನಾ ಧ್ವಜ ಹಾಗೂ ಚೀನಾ ಪರ ಘೋಷಣೆಗಳನ್ನು ಕೂಗಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಹಣಕಾಸು ಕೇಂದ್ರ ಎನಿಸಿಕೊಂಡಿರುವ ಹಾಂಕಾಂಗ್‌ ಬಿಕ್ಕಟ್ಟಿನಲ್ಲಿ ಸಿಲುಕಿದೆ.

ಭಾನುವಾರ ಈ ಪ್ರತಿಭಟನೆಯಲ್ಲಿ 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇರುವ ಕಾರಣ, ಪ್ರತಿಭಟನೆ ಮತ್ತೊಂದು ಹಂತ ಮುಟ್ಟುವ ಎಲ್ಲಾ ಲಕ್ಷಣಗಳಿವೆ. ಈ ನಡುವೆ ಹಾಂಕಾಂಗ್‌ ಗಡಿಯಲ್ಲೇ ಬರುವ ತನ್ನ ಶೆನ್ಜಾನ್‌ ನಗರದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದು, ಯಾವುದೇ ಸಮಯದಲ್ಲಿ ಹಾಂಕಾಂಗ್‌ನೊಳಗೆ ನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಡಿದೆದ್ದ ಹಾಂಕಾಂಗ್ : ಚೀನಿ ಸೇನೆಯ ವೈಲೆಂಟ್ ‘ಲಾಂಗ್ ಮಾರ್ಚ್’!

ಶನಿವಾರ ದೊಡ್ಡ ಸಂಖ್ಯೆಗಳಲ್ಲಿ ಶಿಕ್ಷಕರು ಹಾಗೂ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸರ್ಕಾರಿ ಕಚೇರಿಗಳ ಮೇಲೆ ಮೊಟ್ಟೆಹಾಗೂ ಕಲ್ಲು ಎಸೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಹಾಗೂ ರಬ್ಬರ್‌ ಬುಲೆಟ್‌ಗಳನ್ನು ಪ್ರಯೋಗಿಸಿದ್ದಾರೆ. ನಾವು ನಮ್ಮ ಬೇಡಿಕೆ ಈಡೇರುವವ ವರೆಗೆ ಪ್ರತಿಭಟನೆ ನಡೆಸಲಿದ್ದೇವೆ. ಚೀನಾದ ಈ ನಿಲುವು ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಗೆ ತೊಂದರೆ ಉಂಟಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಭಾನುವಾರ ಇನ್ನೂ ಹೆಚ್ಚಿನ ಜನರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಚೀನಾ ಪ್ರತಿಭಟನೆ ಹತ್ತಿಕ್ಕಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆತಂಕ ಸೃಷ್ಠಿಯಾಗಿದೆ.

ಮಂಗಳವಾರ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರು, ಬಳಿಕ ಹಿಂಸಾತ್ಮ ರೂಪ ಅನುಸರಿಸಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ಮಧ್ಯೆ ಪ್ರತಿಭಟನೆ ನಿಯಂತ್ರಣಕ್ಕೆ ಚೀನಾ ತನ್ನ ಸೇನೆಯನ್ನು ಹಾಂಕಾಂಗ್‌ ಗಡಿಯತ್ತ ರವಾನಿರುವ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿದೆ. ಚೀನಾದ ಈ ನಿಲುವು ವಿಶ್ವ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದ್ದು, ಇದರಿಂದ ಚೀನಾಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಅಂದಾಜಿಲಾಗಿದೆ.

Follow Us:
Download App:
  • android
  • ios