ಜವಾಹರ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

First Published 12, Oct 2017, 8:08 PM IST
Application invited for admission Navodaya Vidyalaya
Highlights

ಜವಾಹರ ನವೋದಯ ವಿದ್ಯಾಲಯವು ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಉಚಿತ ವಸತಿಶಾಲೆಯಾಗಿದೆ.

ಶಿವಮೊಗ್ಗ(ಅ.12): ಜವಾಹರ ನವೋದಯ ವಿದ್ಯಾಲಯ, ಗಾಜನೂರು 18-19ನೇ ಸಾಲಿನ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸರ್ಕಾರದಿಂದ ಮಾನ್ಯತೆ ಪಡೆದ ಶಿವಮೊಗ್ಗ ಜಿಲ್ಲೆಯ ಯಾವುದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದು, ಮೇ-2005 ರಿಂದ ಏಪ್ರಿಲ್ 2009ರೊಳಗೆ ಜನಸಿದವರಾಗಿರಬೇಕು. ಅರ್ಹ ಅಭ್ಯರ್ಥಿಗಳು ತಮ್ಮ ಪಾಲಕ, ಪೋಷಕರೊಂದಿಗೆ 5ನೇ ತರಗತಿ ಓದುತ್ತಿರುವ ಶಾಲೆಯ ದಾಖಲಾತಿಯನ್ನು ಶಾಲೆಯ ಮುಖ್ಯೋಪಾದ್ಯಾಯರ ಸಹಿ/ಸೀಲು ಹಾಕಿಸಿಕೊಂಡು ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನವೋದಯ ವಿದ್ಯಾಲಯ ಸಮಿತಿಯ ವೆಬ್‌ಸೈಟ್ www.nvshg.com ನಲ್ಲಿ ನ. 25ರೊಳಗಾಗಿ ನೊಂದಾಯಿಸಿಕೊಳ್ಳುವುದು.

ಜವಾಹರ ನವೋದಯ ವಿದ್ಯಾಲಯವು ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಉಚಿತ ವಸತಿಶಾಲೆಯಾಗಿದೆ. ಆಯ್ಕೆಯಾದ ಮಕ್ಕಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ ಹಾಗೂ ಪ್ರವೇಶ ಪತ್ರ ಸಿಗದೆ ಇರುವವರು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರನ್ನು ಅಥವಾ ದೂ. ಸಂಖ್ಯೆ 08182 0234250 ಸಂಪರ್ಕಿಸಬಹುದು.

loader