ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ವಿವೇಕ್ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನೆರವು ಪ್ರಕಟಿಸಿದ್ದಾರೆ.
ಲಖನೌ[ಅ.02]: ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್ ಸಂಸ್ಥೆಯ ಉದ್ಯೋಗಿ ವಿವೇಕ್ ತಿವಾರಿ ಕುಟುಂಬಕ್ಕೆ ಉತ್ತರಪ್ರದೇಶ ಸರ್ಕಾರ ವಿವಿಧ ನೆರವು ಘೋಷಿಸಿದೆ. ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ
ವಿವೇಕ್ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನೆರವು ಪ್ರಕಟಿಸಿದ್ದಾರೆ.
ಇದರನ್ವಯ, ವಿವೇಕ್‌ರ ಪತ್ನಿ ಕಲ್ಪನಾಗೆ ಲಖನೌ ಮುನ್ಸಿಪಲ್ ಕಚೇರಿಯಲ್ಲಿ ನೌಕರಿ, ಕುಟುಂಬಕ್ಕೆ ಒಂದು ಮನೆ, ತಿವಾರಿ ಇಬ್ಬರು ಮಕ್ಕಳು ಮತ್ತು ತಿವಾರಿ ತಾಯಿ ಹೆಸರಲ್ಲಿ ತಲಾ 5 ಲಕ್ಷ ರು. ಠೇವಣಿ ಇಡಲಾಗುವುದು, ಕುಟುಂಬಕ್ಕೆ 25 ಲಕ್ಷ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಯೋಗಿ ಭರವಸೆ ನೀಡಿದರು.
