ಜ.18ರಂದು ಒಕ್ಕಲಿಗರ ಸಂಘಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಿಗದಿ ಮಾಡಲಾಗಿದೆ. ಉಪಾಧ್ಯಕ್ಷರಾದ ಪ್ರಸನ್ನ, ಶಶಿಕಿರಣ್, ಖಜಾಂಜಿ ಕಾಳೇಗೌಡ ಮತ್ತು ಕಾರ್ಯದರ್ಶಿ ಸ್ಥಾನದಿಂದ ಮಂಜುನಾಥ್ ಪದಚ್ಯುತಿಗೊಳಿಸಲಾಗಿದೆ.
ಬೆಂಗಳೂರು(ಜ.06): ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಅಪ್ಪಾಜಿಗೌಡ ಪದಚ್ಯುತಿಗೊಳಿಸಿರುವುದಾಗಿ ಅಪ್ಪಾಜಿ ಗೌಡರ ವಿರೋಧಿ ಬಣ ಸ್ಪಷ್ಟಪಡಿಸಿದೆ. ಅಪ್ಪಾಜಿಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ರಿಜಿಸ್ಟ್ರಾರ್ ಬಸವಯ್ಯ ನೇತೃತ್ವದಲ್ಲಿ ಪದಚ್ಯುತಿಗೆ ನಿರ್ಧಾರ ಕೈಗೊಳ್ಳಲಾಗಿದೆ.
ಜ.18ರಂದು ಒಕ್ಕಲಿಗರ ಸಂಘಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಿಗದಿ ಮಾಡಲಾಗಿದೆ. ಉಪಾಧ್ಯಕ್ಷರಾದ ಪ್ರಸನ್ನ, ಶಶಿಕಿರಣ್, ಖಜಾಂಜಿ ಕಾಳೇಗೌಡ ಮತ್ತು ಕಾರ್ಯದರ್ಶಿ ಸ್ಥಾನದಿಂದ ಮಂಜುನಾಥ್ ಪದಚ್ಯುತಿಗೊಳಿಸಲಾಗಿದೆ.
ಒಟ್ಟು 35 ನಿರ್ದೇಶಕರಿರುವ ಕಾರ್ಯಕಾರಿಣಿ ಸಮಿತಿಯಲ್ಲಿ 18 ಮಂದಿ ನಿರ್ದೇಶಕರಿಂದ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಹಂಗಾಮಿ ಕಾರ್ಯದರ್ಶಿಯಾಗಿ ನಾರಾಯಮೂರ್ತಿ ನೇಮಕ ಮಾಡಲಾಗಿದೆ.