ಹಿಂಗ್ಯಾಕಾಯ್ತು?: ನಭಕ್ಕೆ ಚಿಮ್ಮಲಿದ್ದ ರಾಕೆಟ್ ನೆಲದಲ್ಲೇ ಸ್ಫೋಟ!

apanese Rocket Crashes Seconds After Lift-Off, Bursts Into Flames
Highlights

ಉಡಾವಣಾ ಹಂತದಲ್ಲಿ ಸ್ಫೋಟಗೊಂಡ ರಾಕೆಟ್

ಜಪಾನ್ ನ ಇಂಟ್ರಾಸ್ಟೆಲ್ಲರ್ ಟೆಕ್ನಾಲೋಜಿ ಸಂಸ್ಥೆ

ತಾಂತ್ರಿಕ ದೋಷದಿಂದ ಸ್ಫೋಟಗೊಂಡ ಖಾಸಗಿ ರಾಕೆಟ್ 
 

ಟೊಕಿಯೊ(ಜೂ.30): ಖಾಸಗಿ ರಾಕೆಟ್ ತಯಾರಿಕಾ ಸಂಸ್ಥೆ ತಯಾರಿಸಿದ್ದ ರಾಕೆಟ್ ವೊಂದು ಉಡಾವಣೆ ಸಮಯದಲ್ಲಿ ಸ್ಫೋಟಗೊಂಡ ಘಟನೆ ಜಪಾನ್ ನಲ್ಲಿ ನಡೆದಿದೆ. ಉಡಾವಣೆಯಾಗುತ್ತಿದ್ದಂತೇ ರಾಕೆಟ್ ನೆಲಕ್ಕೆ ಬಿದ್ದು ಸ್ಫೋಟಗೊಳ್ಳುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಲ್ಲಿನ ಇಂಟ್ರಾಸ್ಟೆಲ್ಲರ್ ಟೆಕ್ನಾಲೋಜಿ ಎಂಬ ಖಾಸಗಿ ಸಂಸ್ಥೆ ಅಭಿವೃದ್ಧಿಪಡಿಸಿದ್ದ ಈ ರಾಕೆಟ್, ಹಲವು ಉಪಕರಣಗಳನ್ನು ಹೊತ್ತು ನಭಕ್ಕೆ ಚಿಮ್ಮಲಿತ್ತು. ಆದರೆ ಉಡಾವಣೆಯಾದ ಕೆಲವೇ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ರಾಕೆಟ್ ನೆಲಕ್ಕೆ ಬಿದ್ದು ಸ್ಫೋಟಗೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಇಂಟ್ರಾಸ್ಟೆಲ್ಲರ್ ಟೆಕ್ನಾಲೋಜಿ ಸಂಸ್ಥೆ, ರಾಕೆಟ್ ಸ್ಫೋಟಗೊಂಡ ಪರಿಣಾಮ ತಮ್ಮ ಯೋಜನೆಗೆ ತಾತ್ಕಾಲಿಕ ತಡೆ ನೀಡಿದ್ದು, ಮುಂದಿನ ದಿನಗಳಲ್ಲಿ ಉನ್ನತ ತಂತ್ರಜ್ಞಾನದೊಂದಿಗೆ ಮತ್ತೆ ರಾಕೆಟ್ ಉಡಾವಣೆಗೆ ಪ್ರಯತ್ನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

loader