ಆಂಧ್ರಪ್ರದೇಶಕ್ಕೆ ವಶೇಷ ಸ್ಥಾನಮಾನ ಬೇಡಿಕ ೆಸಂಬಂಧ ಕೇಂದ್ರ ಸರಕಾರ ಮತ್ತು ಟಿಟಿಪಿ ಸಮರ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿ ನಂತರವೂ ಮುಂದುವರಿದಿದ್ದು, ಪಕ್ಷದ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೊಸದಿಲ್ಲಿ: ಆಂಧ್ರಪ್ರದೇಶಕ್ಕೆ ವಶೇಷ ಸ್ಥಾನಮಾನ ಬೇಡಿಕ ೆಸಂಬಂಧ ಕೇಂದ್ರ ಸರಕಾರ ಮತ್ತು ಟಿಟಿಪಿ ಸಮರ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿ ನಂತರವೂ ಮುಂದುವರಿದಿದ್ದು, ಪಕ್ಷದ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸಚಿವ ಸಂಪುಟದಿಂದ ಹೊರಬರಲು ಟಿಡಿಪಿ ನಿನ್ನೆ ಸಭೆ ನಡೆಸಿತ್ತು. ಇಂದು ಈ ವಿಷಯವಾಗಿ ನಾಯ್ಡು-ಮೋದಿ ನಡುವೆ ಮಾತುಕತೆ ನಡೆದಿದ್ದು, ಯಾವುದೇ ಫಲ ನೀಡಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಸಂಬಂಧ ಟಿಡಿಪಿ ಶೀಘ್ರವೇ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.

Scroll to load tweet…

Scroll to load tweet…

ನಾಗರಿಕ ವಿಮಾನಯಾನ ಸಚಿವ ಗಣಪತಿ ರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಎಸ್.ಚೌಧರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಮೈತ್ರಿಪಕ್ಷ ಟಿಡಿಪಿ ಬಿಜೆಪಿ ಮೈತ್ರಿಕೂಟದಿಂದ ಹೊರಬಂದಿದ್ದರಿಂದ ಬಿಜೆಪಿಗೆ ಹಿನ್ನೆಡೆಯಾಗಿದ್ದು, 2019ರ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದ ಪಕ್ಷಕ್ಕೆ ಶಾಕ್ ನೀಡಿದಂತಾಗಿದೆ. ಈಗಾಗಲೇ ಶಿವಸೇನೆಯೂ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದೆ.