‘ನಾನು ಪೊಲೀಸ್ ಇಲಾಖೆಯಲ್ಲಿದ್ದವಳು. ಪೊಲೀಸಿಂಗ್ ಮಾಡಿ ಚೆನ್ನಾಗಿ ಗೊತ್ತಿದೆ. ಪೊಲೀಸ್ ಇಲಾಖೆಯಲ್ಲಿದ್ದರೆ ಸಣ್ಣಪುಟ್ಟ ಕಳ್ಳರನ್ನಷ್ಟೇ ಹಿಡಿಯಬಹುದು. ಈಗ ಪೊಲೀಸ್ ಇಲಾಖೆಯಿಂದ ಹೊರ ಬಂದಿದ್ದೇನೆ. ರಾಜಕೀಯ ರಂಗದಲ್ಲಿ ಪೊಲೀಸಿಂಗ್ ಮಾಡುವುದಕ್ಕೆ ಹೊರಟಿದ್ದೇನೆ. ದೊಡ್ಡ ಕಳ್ಳರನ್ನು ಹಿಡಿಯಲಿದ್ದೇನೆ.’

ಉಡುಪಿ: ‘ನಾನು ಪೊಲೀಸ್ ಇಲಾಖೆಯಲ್ಲಿದ್ದವಳು. ಪೊಲೀಸಿಂಗ್ ಮಾಡಿ ಚೆನ್ನಾಗಿ ಗೊತ್ತಿದೆ. ಪೊಲೀಸ್ ಇಲಾಖೆಯಲ್ಲಿದ್ದರೆ ಸಣ್ಣಪುಟ್ಟ ಕಳ್ಳರನ್ನಷ್ಟೇ ಹಿಡಿಯಬಹುದು. ಈಗ ಪೊಲೀಸ್ ಇಲಾಖೆಯಿಂದ ಹೊರ ಬಂದಿದ್ದೇನೆ. ರಾಜಕೀಯ ರಂಗದಲ್ಲಿ ಪೊಲೀಸಿಂಗ್ ಮಾಡುವುದಕ್ಕೆ ಹೊರಟಿದ್ದೇನೆ. ದೊಡ್ಡ ಕಳ್ಳರನ್ನು ಹಿಡಿಯಲಿದ್ದೇನೆ.’ ಇದು ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ರಾಜಕೀಯಕ್ಕೆ ಬೇಸತ್ತು ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ನೀಡಿ ಹೊರಗೆ ಬಂದು, ಈಗ ಖುದ್ದು ತಾನೇ ರಾಜಕಾರಣಿಯಾಗುವುದಕ್ಕೆ ಹೊರಟಿರುವ ಅನುಪಮಾ ಶೆಣೈ ತಮ್ಮ ಎದುರಾಳಿಗಳಿಗೆ ನೀಡಿದ ಎಚ್ಚರಿಕೆಯೂ ಹೌದು, ಬೆದರಿಕೆಯೂ ಹೌದು.

ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ರಾಜಕೀಯ ಪಕ್ಷದ ಬಗ್ಗೆ ಜನರಿಂದ ಅಭಿಪ್ರಾಯ ಕೇಳುತ್ತಿದ್ದೇನೆ. ನವೆಂಬರ್‌ನಲ್ಲಿ ಹೊಸ ಪಕ್ಷದ ರೂಪುರೇಷೆಗಳನ್ನು, ಹೆಸರನ್ನು ಅಧಿಕೃತವಾಗಿ ಘೋಷಿಸುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುತ್ತದೆ. 50-60 ಸೀಟು ಸಿಕ್ಕಿದರೂ ಸಾಕು. ಜನರು 10 ಸೀಟು ಕೊಟ್ಟರೂ ಓಕೆ. ಅದೂ ಇಲ್ಲ. ನಿಮ್ಮ ಪಕ್ಷ ಸರಿ ಇಲ್ಲ. ಈಗ ಇರುವ ಪಕ್ಷಗಳೇ ಚೆನ್ನಾಗಿವೆ ಎಂದು ಜನರು ನನ್ನ ಪಕ್ಷದ ಒಬ್ಬರನ್ನೂ ಆರಿಸದಿದ್ದರೂ ಸರಿಯೇ. ಆದರೆ ಚುನಾವಣೆಯವರೆಗಾದ್ರೂ ಈ ರಾಜಕಾರಣಿಗಳನ್ನು ಹೆದರಿಸಲಿಕ್ಕಾದ್ರೂ ಪಕ್ಷ ಕಟ್ಟುತ್ತೇನೆ ಎಂದು ಶೆಣೈ ಮಂಗಳವಾರ ‘ಕನ್ನಡಪ್ರಭ-ಸುವರ್ಣನ್ಯೂಸ್’ಗೆ ಶೆಣೈ ತಿಳಿಸಿದ್ದಾರೆ.