193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯಲ್ಲಿ ಗುಟ್ರೆಸ್ 9ನೆಯವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ
ನ್ಯೂಯಾರ್ಕ್(ಅ.13): ವಿಶ್ವ ಸಂಸ್ಥೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆ್ಯಟೋನಿಯೋ ಗುಟ್ರೆಸ್ ಅವರನ್ನು ನೇಮಕ ಮಾಡಲಾಗಿದೆ. ಪೋರ್ಚುಗಲ್ನ ಮಾಜಿ ಪ್ರಧಾನಿಯಾದ ಇವರು 2017ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ 5 ವರ್ಷದ ಅವಧಿಯವರೆಗೂ ಇವರ ಅಧಿಕಾರವಿರುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯಲ್ಲಿ ಗುಟ್ರೆಸ್ 9ನೆಯವರಾಗಿ ಅಧಿಕಾರ ಸ್ವೀಕರಿಸಲಿದ್ದು, ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ ಮೂನ್ ಅವರ ಅಧಿಕಾರವಧಿ ಈ ವರ್ಷದ ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳಲಿದೆ.
67 ವರ್ಷದ ಗುಟ್ರೆಸ್ 1995 ರಿಂದ 2002ರ ಅವಧಿಯವರೆಗೆ ಪೋರ್ಚಗಲ್'ನ ಪ್ರಧಾನ ಮಂತ್ರಿ,2005 ರಿಂದ 2015 ವರೆಗೆ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರಿಗಾಗಿ ಹೈಮಿಷನರ್ ಆಗಿದ್ದರು.
