ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ  ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಡನೆ ಮಾಡಲಾಗಿದೆ.

ಬೆಳಗಾವಿ (ನ.14): ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಡನೆ ಮಾಡಲಾಗಿದೆ.

ವಿಧೇಯಕದಲ್ಲಿ ಏನಿದೆ?

ಇವುಗಳ ಮೇಲೆ ನಿಷೇಧವಿದೆ

ವಾಮಾಚಾರ ನಿಷೇಧ; ವಾಮಚಾರ ಮಾಡಿದ್ರೆ ಕೊಲೆ ಕೇಸ್ ಹಾಕಲಾಗುತ್ತದೆ.

ಯಾವುದೇ ವ್ಯಕ್ತಿ ತಾನಾಗಾಲೀ, ಬೇರೆಯವರ ಮೂಲಕವಾಗಲಿ ವಾಮಚಾರ ಮಾಡುವಹಾಗಿಲ್ಲ; 302, 307, 306 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು

ಜನ್ಮಾಂತರದ ವಿಷಯ ಎತ್ತಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು

ಸಿಡಿ ಪದ್ಧತಿ ನಿಷೇಧ, ಮಹಿಳೆಯರ ಬೆತ್ತಲೆ ಸೇವೆ ನಿಷೇಧ

ಋತುಮತಿ, ಗರ್ಭಿಣಿ ಮಹಿಳೆಯರನ್ನ ಒಂಟಿಯಾಗಿರಿಸುವುದು ನಿಷೇಧ

ಗಾವು ಪದ್ಧತಿ ನಿಷೇಧ, ಎಂಜಲು ಎಲೆ ಮೇಲೆ ಉರುಳು ಸೇವೆ ನಿಷೇಧ

ಭಾನಾಮತಿ, ಮಾಟ ಮಂತ್ರ, ಗುಪ್ತ ನಿಧಿ ನಿಕ್ಷೇಪ, ಬೆತ್ತಲೆ ಮೆರವಣಿಗೆ, ವ್ಯಕ್ತಿ ಮೇಲೆ ಹಲ್ಲೆ ನಡೆಸುವುದು ನಿಷೇಧ

ಕೆಂಡ ಹಾಯುವ ಪದ್ಧತಿ ನಿಷೇಧ, ಬಾಯಿಗೆ ಬೀಗ ಪದ್ಧತಿ ನಿಷೇಧ

ನಾಯಿ, ಚೇಳು ಕಚ್ಚಿದಾಗ ಚಿಕಿತ್ಸೆ ನೆಪದಲ್ಲಿ ದಾರಾ, ತಾಯ್ತಾ ಕಟ್ಟುವುದು ನಿಷೇಧ

ಮೈಮೇಲೆ ದೇವರು ಬರೋದು ನಿಷೇಧ; ದೆವ್ವ ಬರೋದು, ದೆವ್ವ ಬಿಡಿಸೋದು ನಿಷೇಧ

ಸೈತಾನನ ಅವತಾರದ ಮೂಲಕ ರೋಗ ವಾಸಿ ಮಾಡುವ ಪದ್ಧತಿ ನಿಷೇಧ

ದೈಹಿಕ ನೋವಿನ ಮೂಲಕ ದೆವ್ವ ಬಿಡಿಸುವುದು ನಿಷೇಧ

ಇವುಗಳ ಮೇಲೆ ನಿಷೇಧವಿಲ್ಲ

ವಾಸ್ತುಶಾಸ್ತ್ರ, ಜ್ಯೋತಿಷ್ಯ ಸಲಹೆಗಳಿಗೆ ನಿಷೇಧ ಇಲ್ಲ

ಮಕ್ಕಳಿಗೆ ಕಿವಿ‌ಮೂಗು ಚುಚ್ಚುವುದಕ್ಕೆ ನಿಷೇಧವಿಲ್ಲ

ಜೈನ ಸಂಪ್ರದಾಯದ ಕೇಶಲೋಚನದಂಥ ಆಚರಣೆ ನಿಷೇಧ ಇಲ್ಲ

ಹರಿಕಥೆ, ಭಜನೆ, ಪ್ರವಚನ, ಕೀರ್ತನೆಗಳಿಗೆ ನಿಷೇಧ ಇಲ್ಲ

ಪ್ರದಕ್ಷಿಣೆ, ಯಾತ್ರೆಗಳಿಗೆ ನಿಷೇಧ ಇಲ್ಲ

ಸಂತರ ಪವಾಡದ ಬಗ್ಗೆ ಮಾತನಾಡುವುದು, ಪ್ರಸಾರ ಮಾಡುವುದು ನಿಷೇಧ ಇಲ್ಲ

ಮನೆ, ದೇವಾಲಯ, ದರ್ಗಾ, ಗುರುದ್ವಾರ, ಚರ್ಚ್ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ, ಉಪಾಸನೆ ಆಚರಣೆಗೆ ನಿಷೇಧವಿಲ್ಲ