ನಾಲ್ಕೈದು ಯೋಧರು ಒಟ್ಟಿಗೆ ನಿಂತಿದ್ದು ನೊಂದ ಯೋಧನೊಬ್ಬ ಹಾಡಿನ ಮೂಲಕ ತಮ್ಮ ದಯನೀಯ ಸ್ಥಿತಿಯನ್ನ ತೋರ್ಪಡಿಸಿದ್ದಾನೆ. ಸರಿಯಾಗಿ ರಜೆ ನೀಡದಿರುವ ಬಗ್ಗೆ ಯೋಧ ಲವತ್ತುಕೊಂಡಿದ್ದಾನೆ.
ನವದೆಹಲಿ(ಜ.18): ಸೇನೆಯ ಕೆಟ್ಟ ಊಟದ ವ್ಯವಸ್ಥೆ ಬಗ್ಗೆ ಬಿಎಸ್`ಎಫ್ ಯೋಧ ತೇಜ್ ಬಹದ್ದೂರ್ ಇತ್ತೀಚೆಗೆ ವಿಡಿಯೋ ಮೂಲಕ ದೇಶದ ಗಮನ ಸೆಳೆದಿದ್ದರು. ಬಳಿಕ ಸಿಆರ್`ಪಿಎಫ್ ಯೋಧರೂ ಸಹ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ಯೋಧರ ಈ ಸ್ಥಿತಿ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೋಶಿಯಲ್ ಮೀಡಿಯಾದಲ್ಲಿ ಸೇನೆಯ ಸಮಸ್ಯೆಗಳನ್ನ ಬಹಿರಂಗಪಡಿಸುವ ಬದಲು ನಮ್ಮ ಬಳಿಗೆ ತನ್ನಿ ಎಂದು ತಾಕೀತು ಮಾಡಿದ್ದರು. ಸಮಸ್ಯೆಗಳಿಗೆ ಸೋಶಿಯಲ್ ಮೀಡಿಯಾವನ್ನ ವೇದಿಕೆಯಾಗಿ ಬಳಸದಂತೆ ತಾಕೀತು ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಇಂತಹುದ್ಧೇ ಮತ್ತೊಂದು ವಿಡಿಯೋ ಆನ್`ಲೈನ್`ನಲ್ಲಿ ಬಹಿರಂಗವಾಗಿದೆ.

ನಾಲ್ಕೈದು ಯೋಧರು ಒಟ್ಟಿಗೆ ನಿಂತಿದ್ದು ನೊಂದ ಯೋಧನೊಬ್ಬ ಹಾಡಿನ ಮೂಲಕ ತಮ್ಮ ದಯನೀಯ ಸ್ಥಿತಿಯನ್ನ ತೋರ್ಪಡಿಸಿದ್ದಾನೆ. ಸರಿಯಾಗಿ ರಜೆ ನೀಡದಿರುವ ಬಗ್ಗೆ ಯೋಧ ಲವತ್ತುಕೊಂಡಿದ್ದಾನೆ.