2012ರಲ್ಲಿ ತನ್ನ ತಾಯಿಯಿಂದಲೇ ಹತ್ಯೆಗೀಡಾದ ಶೀನಾ ಬೋರಾ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್'​ನಲ್ಲಿ ಇಂದ್ರಾಣಿಯ ಮೂರನೇ ಪತಿ, ಪೀಟರ್ ಮುಖರ್ಜಿಗೆ ಶೀನಾ ಬೋರಾಳ ಹತ್ಯೆಯ ಸಂಪೂರ್ಣ ವಿವರ ಗೊತ್ತಿತ್ತು ಎಂಬ ವಿಚಾರ ಹೊರಬಿದ್ದಿದೆ. ಜೊತೆಗೆ ವಿಚಾರಣೆಯನ್ನು ಕೋರ್ಟ್​ ನವೆಂಬರ್ 15ಕ್ಕೆ ಮುಂದೂಡಿದೆ.

ಮುಬೈ(ಅ.23): 2012ರಲ್ಲಿ ತನ್ನ ತಾಯಿಯಿಂದಲೇ ಹತ್ಯೆಗೀಡಾದ ಶೀನಾ ಬೋರಾ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್'​ನಲ್ಲಿ ಇಂದ್ರಾಣಿಯ ಮೂರನೇ ಪತಿ, ಪೀಟರ್ ಮುಖರ್ಜಿಗೆ ಶೀನಾ ಬೋರಾಳ ಹತ್ಯೆಯ ಸಂಪೂರ್ಣ ವಿವರ ಗೊತ್ತಿತ್ತು ಎಂಬ ವಿಚಾರ ಹೊರಬಿದ್ದಿದೆ. ಜೊತೆಗೆ ವಿಚಾರಣೆಯನ್ನು ಕೋರ್ಟ್​ ನವೆಂಬರ್ 15ಕ್ಕೆ ಮುಂದೂಡಿದೆ.

ತೀವ್ರ ಕುತೂಹಲ ಹುಟ್ಟಿಸುತ್ತಿದೆ ಶೀನಾ ಬೋರಾ ಹತ್ಯೆ ಪ್ರಕರಣ

2012ರಲ್ಲಿ ತಾಯಿಯಿಂದಲೇ ಕೊಲೆಯಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಪ್ರಕರಣ ವಿಚಾರಣೆ ನಡೆಸಿದ ಸಿಬಿಐ ಕಳೆದ ಶುಕ್ರವಾರ ಹೆಚ್ಚುವರಿ ಚಾರ್ಜ್​ ಶೀಟ್​ ಸಲ್ಲಿಸಿದ್ದು, 200 ಪುಟಗಳ ವರದಿಯಲ್ಲಿ ಮಹತ್ವದ ವಿಚಾರಗಳನ್ನ ಬಿಚ್ಚಿಟ್ಟಿದೆ. ಶೀನಾ ಹತ್ಯೆಯ ಸಂಚಿನ ಬಗ್ಗೆ ಉದ್ಯಮಿ ಪೀಟರ್ ಮುಖರ್ಜಿಗೆ ಮಾಹಿತಿ ಇತ್ತು. ಪೀಟರ್'​ಗೆ ಇಂದ್ರಾಣಿ ಮುಖರ್ಜಿ ಮಾಹಿತಿ ನೀಡಿದ್ದರು ಎಂದು ಸಿಬಿಐ ಚಾರ್ಜ್ ಶೀಟ್'ನಲ್ಲಿ ಉಲ್ಲೇಖಿಸಿದ್ದಾರೆ.

ಸಿಬಿಐಚಾರ್ಜ್ಶೀಟ್ನಲ್ಲಿಏನಿದೆ?

-ಇಂದ್ರಾಣಿ ಮುಖರ್ಜಿಯ ಮೊದಲ ಪತಿಯ ಪುತ್ರಿ ಶೀನಾ ಬೋರಾ

-ಇಂದ್ರಾಣಿಯ 3ನೇ ಪತಿ ಪೀಟರ್ ಮುಖರ್ಜಿ

-ಪೀಟರ್ ಮುಖರ್ಜಿ ಪುತ್ರ ರಾಹುಲ್ ಶೀನಾ ಬೋರಾಳಿಗೂ ಸಂಬಂಧವಿತ್ತು

-ಈ ವಿಚಾರ ಇಬ್ಬರಿಗೂ ಸಹಮತವಿರದ ಕಾರಣಕ್ಕೆ ಹತ್ಯೆ

-ಹತ್ಯೆ ಬಳಿಕ ಶೀನಾ ಬೋರಾಳ ಮೃತ ದೇಹವನ್ನು ಸುಟ್ಟು ಹಾಕಲಾಗಿತ್ತು

-ರಾಯಘಡ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಸಾಕ್ಷ್ಯ ಸಿಗದಂತೆ ಸುಟ್ಟು ಹಾಕಿದ್ದರು

-ಶೀನಾ ಹತ್ಯೆಯ ಸಂಚಿನ ಬಗ್ಗೆ ಮೊದಲ್ಲೇ ಮಾಹಿತಿ ತಿಳಿದಿದ್ದ ಪೀಟರ್

-ಶೀನಾ ಜೊತೆ ಹತ್ತಿರವಾಗದಂತೆ ಮಗನಿಗೆ ಈ-ಮೇಲ್ ಮಾಡಿದ್ದ ಪೀಟರ್

 ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದ ಕೋರ್ಟ್​

ಚಾರ್ಜ್​ಶೀಟ್​'ನಲ್ಲಿ ಪೀಟರ್‌ ಮುಖರ್ಜಿ, ಪತ್ನಿ ಇಂದ್ರಾಣಿ ಮತ್ತು ಇಂದ್ರಾಣಿಯ ಮಾಜಿ ಪತಿ ಸಂಜೀವ್‌ ಖನ್ನಾ ವಿರುದ್ಧ ದೋಷಾರೋಪ ನಿಗದಿ ಮಾಡುವಂತೆ ಕೋರಲಾಗಿದೆ. ಇದಕ್ಕೆ ಪ್ರತಿವಾದ ಸಿದ್ಧಪಡಿಸಲು ನಮಗೆ ತುಸು ಸಮಯ ಬೇಕು ಎಂದು ಪೀಟರ್‌ ಪರ ವಕೀಲರು ಹೆಚ್ಚಿನ ಸಮಯವಕಾಶ ಕೇಳಿದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನವೆಂಬರ್ 15ಕ್ಕೆ ಮುಂದೂಡಿದೆ.