ಹೊಸ್ಟನ್(ಸೆ.27): ಅಮೆರಿಕದ ಸೌಥ್‌ವೆಸ್ಟ್‌ಹೂಸ್ಟನ್‌ನ ಸ್ಟ್ರಿಪ್‌ಮಾಲ್‌ನಲ್ಲಿ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾನೆ. ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, 9 ಜನರು ಗಾಯಗೊಂಡಿದ್ದಾರೆ.

ಇದರಲ್ಲಿ ಮೂವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ಓರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿ ಎಕೆ-47 ಮತ್ತು ಎಆರ್‌-15 ಗನ್‌ಗಳಿಂದ ದಾಳಿ ನಡೆಸಿದ್ದಾನೆ.

ಪೊಲೀಸರು ಮತ್ತು ದುಷ್ಕರ್ಮಿ ನಡುವೆ ಗುಂಡಿನ ಚಕಮಕಿ ನಡೆದಿದೆ. ದುಷ್ಕರ್ಮಿ ಸುಮಾರು 100 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಆರೋಪಿಯನ್ನು ಸದೆಬಡೆಯುವಲ್ಲಿ ಹೂಸ್ಟನ್‌ಪೊಲೀಸರು ಯಶಸ್ವಿಯಾಗಿದ್ದಾರೆ. ಇಂತಹ ಘಟನೆಗಳು ಅಮೆರಿಕದಲ್ಲಿ ಪದೇ ಪದೆ ನಡೆಯುತ್ತಿರುವುದು ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ.