Asianet Suvarna News Asianet Suvarna News

ಯುವತಿಯ ಟೀಶರ್ಟ್ ಹಿಡಿದು ಎಳೆದಾಡಿದ್ದ ಕಾಮುಕರು

ಜನವರಿ 4ರ ರಾತ್ರಿ 9ಗಂಟೆಗೆ ಈ ಘಟನೆ ನಡೆದಿದ್ದು  ಯುವತಿ ಕಾಮುಕರಿಂದ ತಪ್ಪಿಸಿಕೊಂಡು ಹೋಗಿದ್ದಳು.  ಜನವರಿ 4ರಂದು ಬಾಣಸವಾಡಿ ಪೊಲೀಸ್​ ಠಾಣೆಗೆ ತೆರಳಿ ಯುವತಿ ದೂರು ದಾಖಲಿಸಿದ್ದಳು.   ಜನವರಿ 5ರಂದು ಐಪಿಸಿ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

another sexual harrassment case in bengaluru

ಬೆಂಗಳೂರು(ಜ.07): ಬೆಂಗಳೂರಿನಲ್ಲಿ  ಲೈಂಗಿಕ ಪ್ರಕರಣಗಳ ಸರಣಿ ಮುಂದುವರೆದಿದೆ. ಕಮ್ಮನಹಳ್ಳಿ, ಕೆ.ಜಿ ಹಳ್ಳಿ ಬಳಿಕ ಬಾಣಸವಾಡಿಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಬಾಣಸವಾಡಿಯ ವ್ಯಾಪ್ತಿಯಲ್ಲಿ  ಬರುವ ಗೋಲ್ಡ್ ಜಿಮ್`ನಿಂದ ರಾತ್ರಿ 9ಗಂಟೆಗೆ ವಾಪಸ್ ಆಗುವಾಗ ಇಬ್ಬರು ಕಾಮುಕರು ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ ಯುವತಿಯ ಟೀ ಶರ್ಟ್ ಹಿಡಿದು ಎಳೆದಾಡಿದ್ದಾರೆ.

ಜನವರಿ 4ರ ರಾತ್ರಿ 9ಗಂಟೆಗೆ ಈ ಘಟನೆ ನಡೆದಿದ್ದು  ಯುವತಿ ಕಾಮುಕರಿಂದ ತಪ್ಪಿಸಿಕೊಂಡು ಹೋಗಿದ್ದಳು.  ಜನವರಿ 4ರಂದು ಬಾಣಸವಾಡಿ ಪೊಲೀಸ್​ ಠಾಣೆಗೆ ತೆರಳಿ ಯುವತಿ ದೂರು ದಾಖಲಿಸಿದ್ದಳು.   ಜನವರಿ 5ರಂದು ಐಪಿಸಿ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.