ಈಗಾಗಲೇ ಹೊಸವರ್ಷದಂದು ಬೆಂಗಳೂರಿನ ಎಂಜಿ ರೋಡ್'ನಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಯುವಕರ ಕಾಮಚೇಷ್ಟೆ ದೇಶದೆದುರೇ ತಲೆತಗ್ಗಿಸುವಂತೆ ಮಾಡಿತ್ತು. ಆದರೆ ಇದೀಗ ಇಂತಹುದೇ ಮತ್ತೊಂದು ಪ್ರಕರಣ ಬಯಲಾಗಿದ್ದು, ನಡುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಯುವಕರಿಬ್ಬರು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಯುವಕರ ೀ ದುಷ್ಕೃತ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಂಗಳೂರು ಯುವತಿಯರಿಗೆ ಸೇಫ್ ಅಲ್ಲ ಎಂಬುವುದನ್ನು ಸಾಬೀತು ಮಾಡಿದೆ.

ಬೆಂಗಳೂರು(ಜ.04): ಈಗಾಗಲೇ ಹೊಸವರ್ಷದಂದು ಬೆಂಗಳೂರಿನ ಎಂಜಿ ರೋಡ್'ನಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಯುವಕರ ಕಾಮಚೇಷ್ಟೆ ದೇಶದೆದುರೇ ತಲೆತಗ್ಗಿಸುವಂತೆ ಮಾಡಿತ್ತು. ಆದರೆ ಇದೀಗ ಇಂತಹುದೇ ಮತ್ತೊಂದು ಪ್ರಕರಣ ಬಯಲಾಗಿದ್ದು, ನಡುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಯುವಕರಿಬ್ಬರು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಯುವಕರ ೀ ದುಷ್ಕೃತ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಂಗಳೂರು ಯುವತಿಯರಿಗೆ ಸೇಫ್ ಅಲ್ಲ ಎಂಬುವುದನ್ನು ಸಾಬೀತು ಮಾಡಿದೆ.

ಈ ಘಟನೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದಿದೆ. ಹೊಸವರ್ಷದ ಬೆಳಗಿನ ಜಾವ ಸುಮಾರು 2:40ರ ಸಮಯದಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಒಬ್ಬಂಟಿಯಾಗಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ . ಯುವತಿ ಇನ್ನೇನು ರಸ್ತೆ ಬದಿಯಲ್ಲಿದ್ದ ತನ್ನ ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಆಕೆಯ ಮೇಲೆರಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಯುವತಿ ಕೊಸರಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಾಕೆಯನ್ನು ರಸ್ತೆಯಲ್ಲಿ ಬಿಸಾಕಿ ಬೈಕ್ ಸವಾರರು ಪರಾರಿಯಾಗಿದ್ದಾರೆ.

ಕಾಮುಕರ ೀ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎದೆ ನಡುಗಿಸುವಂತಿದೆ. ಸದ್ಯ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ಈ ಕುರಿತಾಗಿ ಸುಮೋಟೋ ಕೇಸ್​ ದಾಖಲಾಗಿದೆ .