ಹಗರಣಗಳ ಜತೆ ಜತೆಯಲ್ಲೇ ತಳಕು ಹಾಕ್ಕೊಳ್ತಿರೋ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಬ್ಲಾಂಕ್ ಮಾರ್ಕ್ಸ್ ಕಾರ್ಡ್ ಹಗರಣದಲ್ಲಿ ಸಿಲುಕಿದ್ದ ವಿವಿ ಹಗರಣವನ್ನು ಸುವರ್ಣನ್ಯೂಸ್ ಕೆಲ ದಿನದ ಹಿಂದೆಯಷ್ಟೇ ಬಯಲಿಗೆಳೆದಿತ್ತು. ಈಗ ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತದ ಮತ್ತೊಂದು ಹಗರಣದಲ್ಲಿ ಸಿಲುಕಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿಗೂ ಹಗರಣಗಳಿಗೂ ಅದೇನೋ ಸಂಬಂಧ. ಇತ್ತೀಚಿಗಷ್ಟೇ ಒಂದು ಲಕ್ಷ ಹೆಚ್ಚುವರಿ ಮಾರ್ಕ್ಸ್ ಕಾರ್ಡ್ ಪ್ರಿಂಟ್ ಮಾಡಿಸಿ ವಿವಿ ತನಿಖೆಗೆ ಒಳಪಟ್ಟಿತ್ತು. ಈಗ ಮತ್ತೊಂದು ಹಗರಣದ ಆರೋಪ ಕೇಳಿ ಬಂದಿದೆ. ಏನದು ಹಗರಣ ಈ ವರದಿ ಓದಿ.
ಹಗರಣಗಳ ಜತೆ ಜತೆಯಲ್ಲೇ ತಳಕು ಹಾಕ್ಕೊಳ್ತಿರೋ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಬ್ಲಾಂಕ್ ಮಾರ್ಕ್ಸ್ ಕಾರ್ಡ್ ಹಗರಣದಲ್ಲಿ ಸಿಲುಕಿದ್ದ ವಿವಿ ಹಗರಣವನ್ನು ಸುವರ್ಣನ್ಯೂಸ್ ಕೆಲ ದಿನದ ಹಿಂದೆಯಷ್ಟೇ ಬಯಲಿಗೆಳೆದಿತ್ತು. ಈಗ ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತದ ಮತ್ತೊಂದು ಹಗರಣದಲ್ಲಿ ಸಿಲುಕಿದೆ.
ಡಿಜಿಟಲ್ ಇವ್ಯಾಲ್ಯುಯೇಷನ್ ಕೆಲಸಕ್ಕೆ ವಿ.ವಿ.ಕರೆದಿದ್ದ ಟೆಂಡರ್ನಲ್ಲಿ ಒಟ್ಟು ಮೂರು ಕಂಪನಿ ಭಾಗವಹಿಸಿದ್ದವು. ಈ ವೇಳೆ ಮೆರಿ ಟ್ರ್ಯಾಕ್ ಸರ್ವಿಸಸ್ ಲಿಮಿಟೆಡ್ 2 ಕೋಟಿ 98 ಲಕ್ಷ 20 ಸಾವಿರ ರೂಪಾಯಿ ಮೊತ್ತವನ್ನು ಟೆಂಡರ್ ಕೋಟ್ ಮಾಡಿತ್ತು. ಮೈಂಡ್ ಲಾಜಿಕ್ಸ್ 2 ಕೋಟಿ 43 ಲಕ್ಷ ರೂಪಾಯಿ, ಎಡುಕ್ವಿಟಿ ಕಂಪನಿ 2 ಕೋಟಿ 84 ಲಕ್ಷ 40 ಸಾವಿರ ರೂಪಾಯಿ ಕೋಟ್ ಮಾಡಿತ್ತು. ಇದ್ರಲ್ಲಿ ಲೋಯೆಷ್ಟ್ ಬಿಡ್ ಮಾಡಿರೋ ಮೈಂಡ್ ಲಾಜಿಕ್ಸ್ ಕಂಪನಿಗೆ ಟೆಂಡರ್ ಸಿಗ್ಬೇಕಿತ್ತು. ಆದರೆ ಟೆಂಡರ್ ಸಿಕ್ಕಿದ್ದು ಮಾತ್ರ ಹೈಯೆಷ್ಟ್ ಬಿಡ್ ಮಾಡಿರೋ ಮೆರಿ ಟ್ರ್ಯಾಕ್ ಕಂಪನಿಗೆ.
ಭ್ರಷ್ಟ ಅಧಿಕಾರಿಗಳು ಶಾಮೀಲು!
ಮೆರಿ ಟ್ರ್ಯಾಕ್ ಕಂಪನಿ ಟೆಂಡರ್ನಲ್ಲಿ ನಮೂದಿಸಿರುವ ಮೊತ್ತ ದುಬಾರಿ ಆಗಿದ್ದರೂ ಇದೇ ಕಂಪನಿಗೆ ಟೆಂಡರ್ ಸಿಗೋ ರೀತೀಲಿ ವಿಶ್ವವಿದ್ಯಾಲಯದ ಕೆಲ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋ ಅನುಮಾನಗಳಿವೆ. ಹಣಕಾಸು ಅಧಿಕಾರಿ ತಕರಾರು ತೆಗೆದಾಗ ಭ್ರಷ್ಟ ಅಧಿಕಾರಿಗಳು, ಕಂಪನಿ ಜತೆ ಸಂಧಾನ ನಡೆಸಿದ್ದಾರೆ. ಸಂಧಾನದ ನಂತರ ಕಡೆಗೆ ಕಂಪನಿ ನಮೂದಿಸಿದ್ದ ಒಟ್ಟು ಮೊತ್ತದಲ್ಲಿ ಕಡಿಮೆ ಮಾಡಿದ್ದು ಎಷ್ಟು ಗೊತ್ತಾ....? ಕೇವಲ 5 ಪೈಸೆಯಷ್ಟೇ.
ಹಂಗೂ ಹಿಂಗೂ ಹರಸಾಹಸ ಮಾಡಿ ಟೆಂಡರ್ ಗಿಟ್ಟಿಸಿಕೊಂಡಿದ್ದ ಮೆರಿ ಟ್ರ್ಯಾಕ್ ಕಂಪನಿ ಮಾಡಿದ್ದು ಕಳಪೆ ಕೆಲಸ. ಪತ್ರಿಕೆಗಳ ಸ್ಕ್ಯಾನಿಂಗ್ ಸೇರಿ ಇನ್ನಿತರೆ ಕೆಲಸಗಳನ್ನ ಸಮರ್ಪಕವಾಗಿ ಮಾಡಿಲ್ಲ . ಕೆಲಸದಲ್ಲಿ ಆಗ್ತಿರೋ ವಿಳಂಬ ಮತ್ತು ಲೋಪವನ್ನು ತಗ್ಗಿಸಬೇಕು ಅಂತ ವಿವಿ ನೋಟಿಸ್ ನೀಡಿದೆ. ಅದರೆ ನೋಟಿಸ್ ಗೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ವಿವಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಆಗ್ಲಿ, ವಿಶ್ವವಿದ್ಯಾಲಯದ ಕುಲಪತಿ ಡಾ.ರವೀಂದ್ರನಾಥ್ ಅವರಾಗಲಿ ಇದರತ್ತ ಗಮನವನ್ನೇ ಹರಿಸಿಲ್ಲ. ಅನುಮಾನ ಬರೋದಿಕ್ಕೆ ಇದು ಕೂಡ ಒಂದು ಕಾರಣ.
ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್
