ಸಚಿವರಾದ ಡಿ.ಕೆ.ಶಿವಕುಮಾರ, ಬಸವರಾಜ ರಾಯರಡ್ಡಿ, ಎಚ್.ಕೆ.ಪಾಟೀಲ, ಎಚ್.ಸಿ. ಮಹಾದೇವಪ್ಪ, ಯು.ಟಿ.ಖಾದರ, ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಫಿರೋಜ್ ಸೇಠ್, ಮಹಾಂತೇಶ ಕವಟಗಿಮಠ, ವಿಶ್ವನಾಥ ಪಾಟೀಲ, ಗಣೇಶ ಹುಕ್ಕೇರಿ, ಹಾಲಿ, ಮಾಜಿ ಶಾಸಕರು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭಕೋರಿದರು.
-ಶ್ರೀಶೈಲ ಮಠದ, ಗೋಕಾಕ
ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಸಂತೋಷ ಅವರ ವಿವಾಹ ಅಂಬಿಕಾ ಜೊತೆಗೆ ಕರದಂಟಿನ ನಗರಿ ಗೋಕಾಕದ ಮಯೂರ ಶಾಲೆಯ ಮೈದಾನದಲ್ಲಿ ಸೋಮವಾರ ಅದ್ಧೂರಿಯಿಂದ ನಡೆಯಿತು.
ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದ್ದ ಅದ್ಧೂರಿ ಸೆಟ್‌ನ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆದಿದ್ದು, ಈ ಸಮಾರಂಭಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು.
ಸಚಿವರಾದ ಡಿ.ಕೆ.ಶಿವಕುಮಾರ, ಬಸವರಾಜ ರಾಯರಡ್ಡಿ, ಎಚ್.ಕೆ.ಪಾಟೀಲ, ಎಚ್.ಸಿ. ಮಹಾದೇವಪ್ಪ, ಯು.ಟಿ.ಖಾದರ, ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಫಿರೋಜ್ ಸೇಠ್, ಮಹಾಂತೇಶ ಕವಟಗಿಮಠ, ವಿಶ್ವನಾಥ ಪಾಟೀಲ, ಗಣೇಶ ಹುಕ್ಕೇರಿ, ಹಾಲಿ, ಮಾಜಿ ಶಾಸಕರು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭಕೋರಿದರು.
ರಮೇಶ ಜಾರಕಿಹೊಳಿ ಸಹೋದರರಾದ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಅವರು ಮದುವೆಗೆ ಬಂದ ಅತಿಥಿಗಳು, ಅಭಿಮಾನಿಗಳನ್ನು ಸ್ವಾಗತಿಸುತ್ತಿರುವುದು ಕಂಡುಬಂದಿತು. ಆದರೆ, ಅವರ ಇನ್ನೊಬ್ಬ ಸಹೋದರ ಡಾ.ಭೀಮಶಿ ಜಾರಕಿಹೊಳಿ ಮಾತ್ರ ಈ ವಿವಾಹ ಕಾರ್ಯಕ್ರಮದಿಂದ ದೂರು ಉಳಿದರು.
ಭೂರಿ ಭೋಜನ: ಮದುವೆ ಮಂಟಪದ ಹಿಂಭಾಗದಲ್ಲಿ ಗಣ್ಯರಿಗಾಗಿ ಪ್ರತ್ಯೇಕವಾಗಿ ಹವಾನಿಯಂತ್ರಿತ ಊಟದ ಶಾಮಿಯಾನ ನಿರ್ಮಿಸಲಾಗಿತ್ತು. ಸುಮಾರು 1 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. 21 ಬಗೆಯ ಸಿಹಿ ತಿನಿಸುಗಳ ಭೂರಿ ಭೋಜನವನ್ನು ಒಂದು ಲಕ್ಷಕ್ಕೂ ಅಕ ಜನರು ಸವಿದರು. ಸಾರ್ವಜನಿಕರಿಗಾಗಿ ವಾಲ್ಮೀಕಿ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರಿಗೆ 8 ಕೌಂಟರ್ ಸೇರಿದಂತೆ ಒಟ್ಟು 20 ಊಟದ ಕೌಂಟರ್‌ಗಳನ್ನು ನಿರ್ಮಿಸಲಾಗಿತ್ತು. ಯಾರಿಗೂ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು.