ವಿಕೃತ ಕಾಮಿ ಉಮೇಶ್ ರೆಡ್ಡಿ, ಸೈಕೋ ಜೈಶಂಕರ್ ಬಂಧನ ನಂತರ ಮತ್ತೊಬ್ಬ ಸೈಕೋ ಮಹಿಳೆಯನ್ನ ಕಾಡಲಾರಂಭಿಸಿದ್ದಾನೆ. ಮಹಿಳೆಯನ್ನೇ ಟಾರ್ಗೆಟ್ ಮಾಡಿಕೊಂಡ ಕಿರಾತಕನೊಬ್ಬ ತಡರಾತ್ರಿ ಮನೆಗಳಿಗೆ ನುಗ್ಗಿ ಕಿಟಕಿಯಲ್ಲಿ ಇಣುಕೋದು ಈತನ ಖಯಾಲಿ. ಇದು ಕೇವಲ ಗುಸು ಗುಸು ಮಾತ್ರವಲ್ಲದೆ, ರಾಜರೇಜೇಶ್ವರಿ ನಗರ ನಿವಾಸಿಗಳ ಮೊಬೈಲ್ಗಳಲ್ಲಿ ಇದೇ ವಿಚಾರ ಹರಿದಾಡುತ್ತಿದೆ. ಸೈಕೋಪಾತ್ ವ್ಯಕ್ತಿ ಕುಕೃತ್ರದ ಬಗ್ಗೆ ಸಿಸಿಕ್ಯಾಮರ ದೃಶ್ಯಗಳು ಕೂಡ ಇವೆ. ಈ ಬಗ್ಗೆ ತಮ್ಮ ಫೇಸ್ ಬುಕ್ಗಳಲ್ಲಿ ತಮಗಾದ ಅನುಭವ ಹಂಚಿಕೊಳ್ಳುವ ಮೂಲಕ ಇತರಿಗೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಬೆಂಗಳೂರು ಜನರು ಎಷ್ಟು ಎಚ್ಚರಿಕೆ ವಹಿಸಿದ್ರೂ ಕಡಿಮೆನೇ. ಭದ್ರವಾಗಿ ಲಾಕ್ ಹಾಕಿಕೊಂಡು ಮಲಗಿದ್ರೂ, ದುಷ್ಕರ್ಮಿಗಳು ಮಾತ್ರ ನಿಮ್ಮದಿಯಾಗಿ ನಿದ್ರೆ ಮಾಡೋಕೆ ಬಿಡಲ್ಲ. ಕಾಮುಖ ಉಮೇಶ್ ರೆಡ್ಡಿಯನ್ನು ಹೋಲುವ ಸೈಕೋ ಒಬ್ಬ ರಾಜರಾಜೇಶ್ವರಿ ನಗರ ನಗರ ನಿದ್ದೆಗೆಡಿಸಿದ್ದಾನೆ.. ಅಷ್ಟಕ್ಕೂ ಯಾರವನು..? ಅವನ ಸೈಕೋ ಕೃತ್ಯವೇನು.? ಇಲ್ಲಿದೆ ಡಿಟೈಲ್ಸ್.
6 ತಿಂಗಳಿಂದ ಮಹಿಳೆಯರ ನಿದ್ದೆ ಕದ್ದ ಸೈಕೋ.!
ವಿಕೃತ ಕಾಮಿ ಉಮೇಶ್ ರೆಡ್ಡಿ, ಸೈಕೋ ಜೈಶಂಕರ್ ಬಂಧನ ನಂತರ ಮತ್ತೊಬ್ಬ ಸೈಕೋ ಮಹಿಳೆಯನ್ನ ಕಾಡಲಾರಂಭಿಸಿದ್ದಾನೆ. ಮಹಿಳೆಯನ್ನೇ ಟಾರ್ಗೆಟ್ ಮಾಡಿಕೊಂಡ ಕಿರಾತಕನೊಬ್ಬ ತಡರಾತ್ರಿ ಮನೆಗಳಿಗೆ ನುಗ್ಗಿ ಕಿಟಕಿಯಲ್ಲಿ ಇಣುಕೋದು ಈತನ ಖಯಾಲಿ. ಇದು ಕೇವಲ ಗುಸು ಗುಸು ಮಾತ್ರವಲ್ಲದೆ, ರಾಜರೇಜೇಶ್ವರಿ ನಗರ ನಿವಾಸಿಗಳ ಮೊಬೈಲ್ಗಳಲ್ಲಿ ಇದೇ ವಿಚಾರ ಹರಿದಾಡುತ್ತಿದೆ. ಸೈಕೋಪಾತ್ ವ್ಯಕ್ತಿ ಕುಕೃತ್ರದ ಬಗ್ಗೆ ಸಿಸಿಕ್ಯಾಮರ ದೃಶ್ಯಗಳು ಕೂಡ ಇವೆ. ಈ ಬಗ್ಗೆ ತಮ್ಮ ಫೇಸ್ ಬುಕ್ಗಳಲ್ಲಿ ತಮಗಾದ ಅನುಭವ ಹಂಚಿಕೊಳ್ಳುವ ಮೂಲಕ ಇತರಿಗೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಫೇಸ್ ಬುಕ್ ಸ್ಟೇಟಸ್
ಎಲ್ಲರಿಗೂ ಹಾಯ್.. ರಾಜರಾಜೇಶ್ವರಿನಗರದಲ್ಲಿ ನಿವಾಸಿಗಳಿಗೆ ಒಂದು ಎಚ್ಚರಿಕೆ ಸಂದೇಶ. ಬಿಇಎಮ್ಎಲ್ 5ನೇ ಸ್ಟೇಜ್ ನ ನ್ಯೂ ಹಾರಿಜನ್ ಸ್ಕೂಲ್ ಬಳಿ ಸೈಕೋ ಒಬ್ಬ ಕಾಣಿಸಿಕೊಂಡಿದ್ದಾನೆ. ಈ ಏರಿಯಾದ ಎಲ್ಲ ಮನೆಗಳಿಗೂ ನುಗ್ಗಿದ್ದಾನೆ. ಬೆಡ್ ರೂಂ ಹಾಗೂ ವಾಶ್ ರೂಂಗಳನ್ನು ಇಣುಕಿ ಮಹಿಳೆಯನ್ನು ನೋಡುವುದು ಈತನ ಖಯಾಲಿ. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆ ವೇಳೆಗೆ ಮನೆಗಳಿಗೆ ನುಗ್ಗುತ್ತಾನೆ.
2 ಬಾರಿ ಆತನನ್ನು ಹಿಡಿಯಲು ಯತ್ನಿಸಿದ್ರೂ, ಸಾಧ್ಯವಾಗಿಲ್ಲ. ಈ ಏರಿಯಾದ ರಸ್ತೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದು, ಮನೆಯಿಂದ ಮನೆಗೆ ಹಾರಿ ಪರಾರಿಯಾಗುತ್ತಾನೆ. ಗೋಡೆಗಳನ್ನು ಏರುವುದು ಹಾಗೂ ಕಾಂಪೌಂಡ್ ಹಾರುವುದರಲ್ಲಿ ಆತ ನಿಸ್ಸೀಮ. ಆತ ತುಂಬಾ ಅಪಾಯಕಾರಿಯಾಗಿದ್ದು, ಆತನನ್ನು ಹಿಡಿಯಲು ನಿಮ್ಮ ಸಹಕಾರ ಬೇಕಿದೆ. ಹಲವು ತಿಂಗಳಿಂದ ಇದೇ ರೀತಿ ಕೃತ್ಯ ಎಸಗುತ್ತಿದ್ದಾನೆ. ಈತನ ಸಿಸಿಟಿವಿ ಫೂಟೇಜ್ ಕೂಡ ಅಟ್ಯಾಚ್ ಮಾಡಿದ್ದೇನೆ. ನಿಮ್ಮ ಕುಟುಂಬಸ್ಥರಿಗೂ ಮಾಹಿತಿ ನೀಡಿ. ಅತನ ಎಲ್ಲಾದ್ರೂ ಕಂಡು ಬಂದಲ್ಲಿ ಮಾಹಿತಿ ನೀಡಿ ಹಿಡಿಯಲು ಸಹಾಯ ಮಾಡಿ.
ಈ ವಿಚಾರ ಚರ್ಚೆ ಕೇವಲ ಸಾಮಾಜಿಕ ಜಾಲ ತಾಣಕ್ಕೆ ಮಾತ್ರ ಸೀಮತವಾಗದೇ ಪೊಲೀಸ್ ಠಾಣೆಗೂ ದೂರು ಸಲ್ಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ರಾಜರಾಜೇಶ್ವರಿ ನಗರ ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡುತ್ತಿದ್ದಾರೆ. ಆದರೆ ಸೈಕೋ ಮತ್ತೆ ಮತ್ತೆ ಏರಿಯಾದಲ್ಲಿ ಕಾಣಿಸಿಕೊಂಡು ಮಹಿಳೆಯ ನಿದ್ದೆಗೆಡಿಸಿದ್ದಾನೆ.
ಪೊಲೀಸರು ಎಷ್ಟೇ ಎಚ್ಚರಿಕೆ ವಹಿಸಿದ್ರೂ, ಈ ಕಾಮ ಕ್ರಿಮಿ ಮಾತ್ರ ಮತ್ತೆ ಮತ್ತೆ ಏರಿಯಾದಲ್ಲಿ ಕಾಣಿಸಿಕೊಂಡು ಭಯದ ವಾತಾವರಣಕ್ಕೆ ಕಾರಣವಾಗಿದ್ದಾನೆ. ಅದಷ್ಟೂ ಬೇಗ ಈ ಸೈಕೋ ಸೆರೆಯಿಡಿದು, ಮಹಿಳೆಯರ ಭಯವನ್ನು ನಿವಾರಣೆ ಮಾಡಬೇಕಿದೆ.