ನ್ಯಾಯಾಲಯದ ಆದೇಶ ಪಾಲಿಸದ ಅಂಜನಿಪುತ್ರ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರ ಮೇಲೆ ಈಗ ನ್ಯಾಯಾಂಗ ನಿಂದನೆಯ ತೂಗುಗತ್ತಿ ನೇತಾಡುತ್ತಿದೆ.
ಬೆಂಗಳೂರು(ಡಿ.27): ಪವರ್ ಸ್ಟಾರ್ ಪುನೀತ್ ರಾಜ್'ಕುಮಾರ್ ಅಭಿನಯದ ಅಂಜನಿಪುತ್ರ ಸಿನೆಮಾದಲ್ಲಿ ವಕೀಲರ ವಿರುದ್ಧ ಡೈಲಾಗ್ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ತಡೆ ನೀಡಿದ್ದರೂ ಅದನ್ನು ಲೆಕ್ಕಿಸದೇ ಚಿತ್ರಪ್ರಸಾರವಾಗುತ್ತಿದೆ. ಇದು ನ್ಯಾಯಾಂಗ ನಿಂದನೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಐ.ಎಫ್ ಬಿದರಿ ಅವರಿದ್ದ ಕೋರ್ಟ್ ಮಾನ್ಯ ಮಾಡಿದೆ.
ನ್ಯಾಯಾಲಯದ ಆದೇಶ ಪಾಲಿಸದ ಅಂಜನಿಪುತ್ರ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರ ಮೇಲೆ ಈಗ ನ್ಯಾಯಾಂಗ ನಿಂದನೆಯ ತೂಗುಗತ್ತಿ ನೇತಾಡುತ್ತಿದೆ.
ಜಿ. ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿದ್ದರು.