ಮುಂಬೈ[ಅ.19]: ಬಹುಕೋಟಿ ಅವ್ಯವಹಾರ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿರುವ ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ)ನ ಇನ್ನೊಬ್ಬ ಗ್ರಾಹಕ ಚಿಕಿತ್ಸೆಗೆ ಹಣ ತೆಗೆಯಲು ಸಾಧ್ಯವಾಗದೇ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ

ಕಳೆದೊಂದು ವಾರದಲ್ಲಿ ನಡೆದ ನಾಲ್ಕನೇ ಪ್ರಕರಣ ಇದಾಗಿದೆ. ಘಟನೆಗೆ ಸಂಬಂಧಿಸಿ ಗ್ರಾಹಕರು ಬುಧವಾರದಿಂದಲೂ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮುರಳೀಧರ್‌ ಧರಾ ಎಂಬವರು ಹೃದಯಾಘಾತದಿಂದ ನಿಧನರಾದ ಪಿಎಂಸಿ ಹಿರಿಯ ಗ್ರಾಹಕ.

8880 ಕೋಟಿ ಒಟ್ಟು ಸಾಲದಲ್ಲಿ ಎಚ್‌ಡಿಐಎಲ್‌ಗೆ 6500 ಕೋಟಿ!

ಅನಾರೋಗ್ಯದ ಹಿನ್ನೆಲೆಯಲ್ಲಿ ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿ ಸಾಧ್ಯವಾಗಿರಲಿಲ್ಲ. ಪರಿಣಾಮ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.