200 ರುಪಾಯಿ ಮೌಲ್ಯದ ನೋಟಿನ ಬಿಡುಗಡೆ ಕುರಿತು ಇದುವರೆಗೆ ಆರ್‌'ಬಿಐ ಅಥವಾ ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತವಾಗಿ ಹೇಳಿಕೆ ಹೊರಬಿದ್ದಿಲ್ಲ.
ನವದೆಹಲಿ(ಏ.05): ಶೀಘ್ರದಲ್ಲೇ 200 ರುಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಆರ್ಬಿಐ ನಿರ್ಧರಿಸಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಆನ್'ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ನೋಟು ‘ಬಿಡುಗಡೆ’ ಆಗಿದೆ.
ಇತ್ತೀಚೆಗೆ ಬಿಡುಗಡೆಯಾದ 500 ರುಪಾಯಿ ಮುಖಬೆಲೆಯ ಹೊಸ ನೋಟಿನ ಮಾದರಿಯಲ್ಲೇ ಇರುವ 200 ರುಪಾಯಿ ಮುಖಬೆಲೆಯ ನೋಟುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದು, ಜನರ ಕುತೂಹಲ ಹೆಚ್ಚಿಸಿದೆ.
200 ರುಪಾಯಿ ಮೌಲ್ಯದ ನೋಟಿನ ಬಿಡುಗಡೆ ಕುರಿತು ಇದುವರೆಗೆ ಆರ್'ಬಿಐ ಅಥವಾ ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತವಾಗಿ ಹೇಳಿಕೆ ಹೊರಬಿದ್ದಿಲ್ಲ.
