ಹಾವೇರಿಯ ರಾಣೆಬೆನ್ನೂರಿನ ದೇವರ ಗುಡ್ಡದಲ್ಲಿ ನಡೆದ ಕಾರ್ಣಿಕದಲ್ಲೂ ಭವಿಷ್ಯ ನುಡಿದ ಕಾರ್ಣಿಕ, ಗೊರವಪ್ಪ ನಾಗಪ್ಪ ಉಮಿ ‘ಈ ವರ್ಷ ಮನುಕುಲಕ್ಕೆ ಅಘಾತವಾಗುವ ಸಾಧ್ಯತೆ’, ‘ಘಾತವಾಸಿತಲೇ ಪರಾಕ್’ ಅಂತ ಭವಿಷ್ಯ ನುಡಿದಿದ್ದಾರೆ.
ಹಾವೇರಿ(ಸೆ.29): ಲಾಲ್ ಬಹದ್ಧೂರ್ ಶಾಸ್ತ್ರಿ ಅವರ ಸಾವಿನ ಮಾದರಿಯಲ್ಲೇ ಈ ದೇಶದಲ್ಲಿ ಮತ್ತೊಬ್ಬ ನಾಯಕನ ಸಾವು ಸಂಭವಿಸುತ್ತೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ದಸರಾ ಜಂಬೂ ಸವಾರಿ ಉತ್ಸವಕ್ಕೆ ಆಗಮಿಸಿದ್ದ ವೇಳೆ, ನಾನು ಆಗ ಚೋಟು ಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷಪಾನ ಮಾಡುತ್ತಾನೆ ಎಂದು ಹೇಳಿದ್ದೆ, ಆಗ ತಾಷ್ಕೆಂಟ್'ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವು ಸಂಭವಿಸಿತ್ತು. ಈಗ ಅಂಥದ್ದೇ ಘಟನೆ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದಿದ್ದಾರೆ.
ಇದರ ನಡುವಲ್ಲೆ ಹಾವೇರಿಯ ರಾಣೆಬೆನ್ನೂರಿನ ದೇವರ ಗುಡ್ಡದಲ್ಲಿ ನಡೆದ ಕಾರ್ಣಿಕದಲ್ಲೂ ಭವಿಷ್ಯ ನುಡಿದ ಕಾರ್ಣಿಕ, ಗೊರವಪ್ಪ ನಾಗಪ್ಪ ಉಮಿ ‘ಈ ವರ್ಷ ಮನುಕುಲಕ್ಕೆ ಅಘಾತವಾಗುವ ಸಾಧ್ಯತೆ’, ‘ಘಾತವಾಸಿತಲೇ ಪರಾಕ್’ ಅಂತ ಭವಿಷ್ಯ ನುಡಿದಿದ್ದಾರೆ.
