ನಿಮ್ಮ ಖಾತೆಗೆ 2 ಲಕ್ಷಕ್ಕೂ ಹೆಚ್ಚು ಹಣ ಡೆಪಾಸಿಟ್ ಮಾಡಿದ್ದೀರಾ? ಹಾಗಾದರೆ ಶೀಘ್ರವಾಗಿ ಪ್ಯಾನ್ ನಂ. ಮಾಡಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಡ್ರಾ ಮಾಡಲು ಆಗುವುದಿಲ್ಲ. ಕಾಳಧನಿಕರ ಕಳ್ಳಾಟಕ್ಕೆ ಪೂರ್ಣ ವಿರಾಮವಿಡುವ ನಿಟ್ಟಿನಲ್ಲಿ RBI ಇಂತಹುದ್ದೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ನವದೆಹಲಿ(ಡಿ.18): ನಿಮ್ಮ ಖಾತೆಗೆ 2 ಲಕ್ಷಕ್ಕೂ ಹೆಚ್ಚು ಹಣ ಡೆಪಾಸಿಟ್ ಮಾಡಿದ್ದೀರಾ? ಹಾಗಾದರೆ ಶೀಘ್ರವಾಗಿ ಪ್ಯಾನ್ ನಂ. ಮಾಡಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಡ್ರಾ ಮಾಡಲು ಆಗುವುದಿಲ್ಲ. ಕಾಳಧನಿಕರ ಕಳ್ಳಾಟಕ್ಕೆ ಪೂರ್ಣ ವಿರಾಮವಿಡುವ ನಿಟ್ಟಿನಲ್ಲಿ RBI ಇಂತಹುದ್ದೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಹೌದು ಇಂತಹುದ್ದೊಂದು ಆದೇಶವನ್ನು RBI ಈಗ ಹೊರಡಿಸಿದೆ. ಪ್ಯಾನ್ ಕಾರ್ಡ್ ಇದ್ದರಷ್ಟೇ ಹಣ ಡ್ರಾಮ ಮಾಡಲು ಸಾಧ್ಯವಾಗುತ್ತದೆ. ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಫಾರ್ಮ್ ನಂ. 60 ಭರ್ತಿ ಮಾಡಿ. ಒಂದು ವೇಳೆ ಈ ಎರಡನ್ನೂ ನೀವು ಮಾಡದಿದ್ದರೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
ಇನ್ನು ಸಂಶಯಾಸ್ಪದ ಬ್ಯಾಂಕ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುವ RBI, ಸಂಶಯಾಸ್ಪದ ಖಾತೆಗಳ ಹಣ ಡ್ರಾ ಮಾಡುವ ಮಿತಿಯನ್ನು 10 ಸಾವಿರ ರೂಪಾಯಿಗೆ ಸೀಮಿತಗೊಳಿಸಿದೆ. ಅಲ್ಲದೇ ಜನ್'ಧನ್ ಖಾತೆ ಹಾಗೂ ಎಸ್'ಬಿ ಖಾತೆಗಳಲ್ಲಿ 2 ಲಕ್ಷಕ್ಕೂ ಅಧಿಕ ಠೇವಣಿ ಮತ್ತು ಇತರ ಖಾತೆಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟವರ ಖಾತೆಗಳನ್ನೂ RBI ಪರಿಶೀಲಿಸಲಿದೆ.
RBIನ ಈ ಹೊಸ ಹೆಜ್ಜೆ ಕಾಳಧನಿಕರಿಗೆ ಸಂಕಟ ತರಲಿದೆ. ನಿಮ್ಮ ಖಾತೆಯಲ್ಲಿಟ್ಟ ಹಣ ನಿಮ್ಮದಾಗಿದ್ದರೆ, ಯಾವುದೇ ಆತಂಕ ಪಡಬೇಕಾಗಿಲ್ಲ. ಆದರೆ ದಾಖಲೆ ಇಲ್ಲದ, ಯಾರದ್ದೋ ಹಣ ನಿಮ್ಮ ಖಾತೆಯಲ್ಲಿ ಡೆಪಾಸಿಟ್ ಮಾಡಿದ್ದರೆ ಮಾತ್ರ ಸಮಸ್ಯೆ ತಪ್ಪಿದ್ದಲ್ಲ.
