'ನಮಿತಾ ಐ ಲವ್ ಯು' ಚಿತ್ರದಲ್ಲಿ ನಟಿಸಿರುವ ನಟ ಅಮಿತ್, ಮದುವೆಯಾಗುವುದಾಗಿ ವಂಚಿಸಿ ಈಗ ಮನೆಯಿಂದ ಹೊರಹಾಕಿದ್ದು, ಆತನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಸ್ಟೇಷನ್'ನಲ್ಲಿ ದೂರು ದಾಖಲಾಗಿದೆ.

ಬೆಂಗಳೂರು(ಜ.05): ಸ್ಯಾಂಡಲ್'ವುಡ್'ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದ್ದು, ನಟ ಅಮಿತ್ ಎಂಬಾತ ಕಿರುತೆರೆ ನಟಿಯೋರ್ವಳನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

'ನಮಿತಾ ಐ ಲವ್ ಯು' ಚಿತ್ರದಲ್ಲಿ ನಟಿಸಿರುವ ನಟ ಅಮಿತ್, ಮದುವೆಯಾಗುವುದಾಗಿ ವಂಚಿಸಿ ಈಗ ಮನೆಯಿಂದ ಹೊರಹಾಕಿದ್ದು, ಆತನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಸ್ಟೇಷನ್'ನಲ್ಲಿ ದೂರು ದಾಖಲಾಗಿದೆ.

ನಟಿಯ ಮೊದಲನೇ ಪತಿ ಅಕಾಲಿಕ ಮರಣ ಹೊಂದಿದ್ದರು. ಸಿಗಂಧೂರಿನಲ್ಲಿ ನಟಿಯನ್ನು ಎರಡನೇ ಮದುವೆಯಾಗಿದ್ದ. ಆದರೆ ಈಗ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ ಎನ್ನಲಾಗಿದೆ ನಟಿಗೆ ಇಬ್ಬರು ಮಕ್ಕಳಿದ್ದು, ಹಲವು ಬಾರಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.