.  ಜಯಲಲಿತಾ ಅವರ ತಾತ ಶ್ರೀನಿವಾಸಾಚಾರ್ ಹಾಗೂ ತಂದೆ ಬಾಲಕೃಷ್ಣಚಾರ್ ನಮ್ಮ ಊರಿನ ಸ್ಥಳೀಯರು ಎನ್ನುತ್ತಿದ್ದಾರೆ ಇವರು.

ತುಮಕೂರು(ಡಿ.12): ಇತ್ತೀಚಿಗಷ್ಟೆ ಅನಾರೋಗ್ಯದಿಂದ ಮೃತಪಟ್ಟ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಗ್ಗೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸದೊಂದು ಗೊಂದಲ ಎದ್ದಿದೆ. ಅವರು ಹುಟ್ಟಿದ್ದು ಮೇಲುಕೋಟೆಯಲ್ಲೋ,ಮೈಸೂರಿನಲ್ಲೂ ಎಂಬ ಗೊಂದಲಗಳು ಇರುವಾಗ. ಅವರು ಅವೆರಡೂ ಸ್ಥಳಗಳಲ್ಲಿ ಹುಟ್ಟಲಿಲ್ಲ ಎನ್ನುತ್ತಿದ್ದಾರೆ ಈ ಗ್ರಾಮಸ್ಥರು. ಜಯಾ ಜನ್ಮಸ್ಥಳ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅಯ್ಯನಹಳ್ಳಿ ಈ ಊರಿನ ಗ್ರಾಮಸ್ಥರ ವಾದ. ಅಯ್ಯನಳ್ಳಿಯಲ್ಲಿ ಅಯ್ಯಂಗಾರ ಕುಟುಂಬದ ಬಂಗಲೆಯೊಂದಿದ್ದು ಅಮ್ಮ ಹುಟ್ಟಿದ್ದು ಇಲ್ಲಿಯೇ ಎಂದು ಹೇಳುತ್ತಿದ್ದಾರೆ. ಜಯಲಲಿತಾ ಅವರ ತಾತ ಶ್ರೀನಿವಾಸಾಚಾರ್ ಹಾಗೂ ತಂದೆ ಬಾಲಕೃಷ್ಣಚಾರ್ ನಮ್ಮ ಊರಿನ ಸ್ಥಳೀಯರು ಎನ್ನುತ್ತಿದ್ದಾರೆ ಇವರು. ಬಾಲಕೃಷ್ಣಾಚಾರ್ ವೇದಾವತಿಯನ್ನು ಮದುವೆಯಾಗಿದ್ದು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇತ್ತು. ಬಾಲಕೃಷ್ಣಾಚಾರ್ ಹಾಗೂ ವೇದಾವತಿ ದಂಪತಿಗೆ ಹುಟ್ಟಿದ ಹೆಣ್ಣುಮಗಳೇ ಜಯಲಲಿತಾ ಎನ್ನಲಾಗಿದೆ. ಆದರೆ ಜಯಲಲಿತಾ ಅಯ್ಯನಳ್ಳಿಯಲ್ಲಿ ಹುಟ್ಟಿದ್ದಕ್ಕೆ ಯಾವುದೇ ದಾಖಲೆ ಲಭ್ಯವಾಗಿಲ್ಲ.