ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ವಿರುದ್ಧ ಡೋಂಗಿ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಆದರೆ, ಆ ಪದವು ಮುಖ್ಯಮಂತ್ರಿಗಳಿಗೆ ಸರಿಹೊಂದುತ್ತದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಂಗಿ ಸಮಾಜವಾದಿಯಾಗಿದ್ದು, ಸಮಾಜವಾದ ಹಿನ್ನೆಲೆಯಿಂದ ಬಂದರೂ ಸುಮಾರು 60 ಸಾವಿರ ಮೌಲ್ಯದ ಶೂಗಳನ್ನು ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಈ ಹಿಂದೆ ದುಬಾರಿ ವಾಚ್ ಧರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡ ಮುಖ್ಯಮಂತ್ರಿಗಳು ದುಬಾರಿ ಶೂ ಧರಿಸುವ ಮೂಲಕ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾ ಗಿದ್ದಾರೆ. ಸಮಾಜವಾದ ಜೀವನ ಆಳವಡಿಸಿಕೊಂಡಿರುವ ಕುರಿತು ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ, ಬಂಡವಾಳಶಾಯಿ ಧೋರಣೆಯ ಐಷಾರಾಮಿ ಜೀವನ ನಡೆಸುತ್ತಾರೆ’ ಎಂದು ಸುದ್ದಿಗೋಷ್ಠಿ ಯಲ್ಲಿ ಟೀಕಿಸಿದರು.ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ವಿರುದ್ಧ ಡೋಂಗಿ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಆದರೆ, ಆ ಪದವು ಮುಖ್ಯಮಂತ್ರಿಗಳಿಗೆ ಸರಿಹೊಂದುತ್ತದೆ ಎಂದರು.

ರೈತರು, ಕಲ್ಲಿದ್ದಲು, ಲೋಡ್‌ಶೆಡ್ಡಿಂಗ್ ಚರ್ಚೆ:

ಸೋಮವಾರದಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ರೈತರ ಬೆಳೆನಷ್ಟ, ಕಲ್ಲಿದ್ದಲು ಕೊರತೆ, ವಿದ್ಯುತ್ ಲೋಡ್‌ಶೆಡ್ಡಿಂಗ್ ವಿಷಯಗಳ ಕುರಿತು ಜೆಡಿಎಸ್ ಪ್ರಮುಖವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ ಎಂದು ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.

ರೈತರ ಸಮಸ್ಯೆಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ. ರೈತರ ಸಂಕಷ್ಟ ಮತ್ತು ಬೆಳೆ ನಷ್ಟ ಕುರಿತು ಅಧಿವೇಶನದಲ್ಲಿ ಪಕ್ಷದ ಶಾಸಕರು ಪ್ರಸ್ತಾಪಿಸಲಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್, ವಿದ್ಯುತ್ ಉತ್ಪಾದನೆಗೆ ಅಗತ್ಯ ಇರುವ ಕಲ್ಲಿದ್ದಲಿನ ತೀವ್ರ ಕೊರತೆ ಎದುರಿಸಲಾಗುತ್ತಿದೆ. ಈ ಕುರಿತು ಸಹ ಚರ್ಚಿಸಲಾಗುವುದು. ಇಂಧನ ಇಲಾಖೆಯ ಸದನ ಸಮಿತಿ ವರದಿಯ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ, ಸರ್ಕಾರ ಮಂಡಿಸುವ ಮಸೂದೆಗಳ ಮೇಲಿನ ಚರ್ಚೆಯಲ್ಲಿನ ಪಕ್ಷದ ಶಾಸಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.