ಸದಾ ವಿವಾದಗಳಲ್ಲೇ ಮುಳುಗಿರುವ  ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅಗ್ರ ಸ್ಥಾನ. ಅದ್ರಲ್ಲೂ ವೈಸ್​ ಛಾನ್ಸಲರ್​​ ಹುದ್ದೆಗೆ ನೇಮಕ ಪ್ರಕ್ರಿಯೆಗಳು ನಡೆದಾಗಲೆಲ್ಲಾ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತನೇ ಇದೆ. ಈಗಾಗಲೇ ವಿವಿಧ ಆರೋಪಗಳನ್ನು ಎದುರುಸುತ್ತಿರುವ ಪ್ರಾಧ್ಯಾಪಕರ ಹೆಸರನ್ನು ಸರ್ಚ್​ ಕಮಿಟಿ ಕುಲಪತಿ ಹುದ್ದೆಗೆ ಸೂಚಿಸಿದೆ. ಸರ್ಚ್​ ಕಮಿಟಿಯ ಈ ನಡೆ ಸುತ್ತ ಈಗ ಹಲವು ಅನುಮಾನಗಳು ಎದ್ದಿವೆ.

ಮೈಸೂರು(ಜು.17): ಸದಾ ವಿವಾದಗಳಲ್ಲೇ ಮುಳುಗಿರುವ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅಗ್ರ ಸ್ಥಾನ. ಅದ್ರಲ್ಲೂ ವೈಸ್​ ಛಾನ್ಸಲರ್​​ ಹುದ್ದೆಗೆ ನೇಮಕ ಪ್ರಕ್ರಿಯೆಗಳು ನಡೆದಾಗಲೆಲ್ಲಾ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತನೇ ಇದೆ. ಈಗಾಗಲೇ ವಿವಿಧ ಆರೋಪಗಳನ್ನು ಎದುರುಸುತ್ತಿರುವ ಪ್ರಾಧ್ಯಾಪಕರ ಹೆಸರನ್ನು ಸರ್ಚ್​ ಕಮಿಟಿ ಕುಲಪತಿ ಹುದ್ದೆಗೆ ಸೂಚಿಸಿದೆ. ಸರ್ಚ್​ ಕಮಿಟಿಯ ಈ ನಡೆ ಸುತ್ತ ಈಗ ಹಲವು ಅನುಮಾನಗಳು ಎದ್ದಿವೆ.

ಶತಮಾನೋತ್ಸವ ಕಂಡಿರುವ ಈ ವಿಶ್ವವಿದ್ಯಾಲಯಕ್ಕೆ ಈ ಬಾರಿಯಾದರೂ ಕಳಂಕ ರಹಿತ ಪ್ರಾಧ್ಯಾಪಕರು ವೈಸ್​ ಛಾನ್ಸಲರ್​ ಹುದ್ದೆಗೆ ನೇಮಕ ಆಗ್ತಾರೆ ಅನ್ನೋ ನಿರೀಕ್ಷೆ ಸುಳ್ಳಾಗಿದೆ. ಯಾಕಂದ್ರೆ ಪ್ರೊ.ಎಚ್​.ಪಿ.ಖಿಂಚಾ ನೇತೃತ್ವದ ಸರ್ಚ್​ ಕಮಿಟಿ ಮೂರು ಹೆಸರುಗಳನ್ನ ಶಿಫಾರಸ್ಸು ಮಾಡಿದ್ದು, ಪ್ರೊ. ಆರ್​.ಕೆ.ಸೋಮಶೇಖರ್​ ಹಸರಿನ ಪ್ರಸ್ತಾಪ ಈಗ ವಿವಾದಕ್ಕೆ ಕಾರಣವಾಗಿದೆ. ಅಂದ್ಹಾಗೆ, ಆರ್​.ಕೆ.ಸೋಮಶೇಖರ್​ ಅವರ ಮೇಲಿರುವ ಕಳಂಕ ಸಣ್ಣಪುಟ್ಟದ್ದಲ್ಲ.

ನಕಲಿ ಅಂಕ ಪಟ್ಟಿ ಹಗರಣದಲ್ಲಿ ಸೋಮಶೇಖರ್​?: ಫಯಾಜ್​ ಅಹ್ಮದ್​ ಭಟ್​ ಹೆಸರಿನಲ್ಲಿ 23 ಅಂಕ ಪಟ್ಟಿ

ಪ್ರೊ.ಆರ್​.ಕೆ.ಸೋಮಶೇಖರ್​ ಬೆಂಗಳೂರು ವಿವಿ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿದ್ದರು. ಈ ವೇಳೆ ಗೌಸಿಯಾ ಇಂಜಿನಿಯರಿಂಗ್​ ಕಾಲೇಜಿನ ಮಹಮದ್​ ಪಿರಾನ್​ ಗೆ ನೀಡಬೇಕಿದ್ದ ಅಂಕ ಪಟ್ಟಿಗಳನ್ನ, ಫಯಾಜ್​ ಅಹ್ಮದ್​ ಭಟ್​ ಎಂಬ ಹೆಸರಿನಲ್ಲಿ ಮುದ್ರಿಸಿದ್ದರು. ಈ ರೀತಿ ಅಂಕಪಟ್ಟಿಯಲ್ಲಿನ ಹೆಸರು ಬದಲಾವಣೆ ಮಾಡಬೇಕಂದ್ರೆ ಬದಲಾವಣೆಗೆ ಸಂಬಂಧ ಪಟ್ಟ ವಿವರಗಳನ್ನ ಲೆಡ್ಜರ್​​'ನಲ್ಲಿ ದಾಖಲಿಸಬೇಕು. ಆದರೆ ಫಯಾಜ್​ ಅಹ್ಮದ್​ ಭಟ್​ ಹೆಸರಿನಲ್ಲಿ ನೀಡಿದ್ದ 23 ಅಂಕಪಟ್ಟಿಗಳ ವಿವರಗಳನ್ನ ಲೆಡ್ಜರ್'​ಗಳಲ್ಲಿ ನಮೂದಿಸಿರಲಿಲ್ಲ.

ಈ ಸಂಬಂಧ ಜಿಲ್ಲಾ ನಿವೃತ್ತ ನ್ಯಾಯಾಧೀಶರು ತನಿಖೆಗೆ ಆದೇಶಿಸಿದ್ದು, ಪ್ರೊ.ಆರ್​.ಕೆ.ಸೋಮಶೇಖರ್​ ವಿರುದ್ಧ ತನಿಖೆ ನಡೆಯುತ್ತಲೇ ಇದೆ. ಆದರೆ ವಿಷಯ ಗೊತ್ತಿದ್ದು ಪ್ರೊ.ಎಚ್.ಪಿ.ಖಿಂಚಾ ನೇತೃತ್ವದ ಸರ್ಚ್​ ಕಮಿಟಿ ಸದಸ್ಯರಾಗಲಿ, ರಾಜ್ಯ ಸರ್ಕಾರವಾಗಲಿ ಇದನ್ನು ಗಮನಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​