ಇತ್ತೀಚೆಗಷ್ಟೇ ಅಸ್ಸಾಂನ ಎಟಿಎಂ ನಲ್ಲಿ ಇಲಿಗಳು ನೋಟುಗಳನ್ನು ತಿಂದು ಕಚ್ಚಿ ಹಾಕಿದ ಬೆನ್ನಲ್ಲೇ ಇದೀಗ  ಮತ್ತೊಂದು ಎಟಿಎಂ ಅವಾಂತರ ಬೆಳಕಿಗೆ ಬಂದಿದೆ. 

ಬೆಳಗಾವಿ: ಇತ್ತೀಚೆಗಷ್ಟೇ ಅಸ್ಸಾಂನ ಎಟಿಎಂ ನಲ್ಲಿ ಇಲಿಗಳು ನೋಟುಗಳನ್ನು ತಿಂದು ಕಚ್ಚಿ ಹಾಕಿದ ಬೆನ್ನಲ್ಲೇ ಇದೀಗ ಮತ್ತೊಂದು ಎಟಿಎಂ ಅವಾಂತರ ಬೆಳಕಿಗೆ ಬಂದಿದೆ. 

ಎಸ್.ಬಿ.ಐ ಗೆ ಸೇರಿದ ಎಟಿಎಮ್ ನಲ್ಲಿ ಸುಟ್ಟ, ಹರಿದ ನೋಟುಗಳು ಪತ್ತೆಯಾಗಿದ್ದು, ಎಟಿಎಂ ನಿಂದ ಹಣ ಡ್ರಾ ಮಾಡಿದ ಗ್ರಾಹಕರು ಕಂಗಾಲಾಗಿದ್ದಾರೆ. 

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಚ್ ಎ ಎಲ್ ಕಂಪನಿ ನೌಕರ ಭಗವಾನ್ ಎಂಬುವರು ಹಣ ಡ್ರಾ ಮಾಡಿದ್ದು, 2 ಸಾವಿರ ಮುಖಬೆಲೆಯ 6 ನೋಟುಗಳು ಡ್ಯಾಮೇಜ್ ಆಗಿ ಕೈ ಸೇರಿವೆ. 

ಹೆಚ್.ಎ.ಎಲ್ ಕಂಪನಿ ಬಳಿಯ ಎಸ್.ಬಿ.ಐ ಎಟಿಎಂನಲ್ಲಿ ಹರಿದ ನೋಟು ಡ್ರಾ ಆಗಿದ್ದು, ಗ್ರಾಹಕ ಭಗವಾನ್ ಬ್ಯಾಂಕ್ ಶಾಖೆಗೆ ದೂರು ನೀಡಿದ್ದಾರೆ. ಇನ್ನೂ ಈ ಘಟನೆ ಇದೇ ಮೊದಲೇನಲ್ಲ, ಈ ಹಿಂದೆಯೂ ಕೂಡ ಇದೇ ಎಟಿಎಂನಲ್ಲಿ ಈ ರೀತಿಯ ಅವಘಡ ವರಿದಿಯಾಗಿದೆ.