ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿರುವ ಹೊತ್ತಿನಲ್ಲೇ ಬಿಜೆಪಿ ಶಾಕ್ ಎದುರಾಗಿದೆ. ಬಿಜೆಪಿ ಮುಖಂಡರೋರ್ವರು ಟಿಕೆಟ್ ಕೈ ತಪ್ಪಿದ ಕಾರಣದ ರಾಜಿನಾಮೆ ನೀಡಿದ್ದಾರೆ. 

ಜೈಪುರ್ :  ರಾಜಸ್ಥಾನದಲ್ಲಿ ಇನ್ನೇನು ಕಲೆವೇ ದಿನದಲ್ಲಿ ಚುನಾವಣೆ ನಡೆಯುತ್ತಿದ್ದು ಇದೇ ವೇಳೆ ಬಿಜೆಪಿ ಮುಖಂಡ ಶ್ರೀ ಕೃಷ್ಣ ಗುಪ್ತ ಪಕ್ಷಕ್ಕೆ ರಾಜಿನಾಮೆ ನೀಡಿ ಶಿವ ಸೇನೆ ಸೇರ್ಪಡೆಯಾಗಿದ್ದಾರೆ. 

Add Asianetnews Kannada as a Preferred SourcegooglePreferred

ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಶಿವಸೇನೆ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. 

ಗುಪ್ತ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿ ಮುಖಂಡರಾಗಿದ್ದು, ಬಿಜೆಪಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಕಾತುರರಾಗಿದ್ದರು. ಆದರೆ ಬಿಜೆಪಿ ಕಳೆದ ವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಗುಪ್ತ ಹೆಸರನ್ನು ಕೈ ಬಿಡಲಾಗಿತ್ತು. ಅಲ್ವಾರ್ ಕ್ಷೇತ್ರದಲ್ಲಿ ಗುಪ್ತ ಬದಲಿಗೆ ಸಂಜಯ್ ಶರ್ಮಾಗೆ ಟಿಕೆಟ್ ನೀಡಲಾಗಿತ್ತು. 

ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ಗುಪ್ತ ಬಿಜೆಪಿಗೆ ಕೈ ಕೊಟ್ಟು ಶಿವಸೇನೆಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. 

ಮುಂದಿನ ಡಿಸೆಂಬರ್ 7ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ.