ಚಿಕ್ಕ ತಿಮ್ಮೇಗೌಡ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಆಮಂತ್ರಣ ಪತ್ರಿಕೆಗಳನ್ನ ಹಂಚಿ ಮನೆಗೆ ವಾಪಸ್ ಆಗ್ತಿದ್ರು. ಈ ವೇಳೆ ಹಿಂದಿನಿಂದ ಬಂದ ಮೂವರು ತಲೆಗೆ ರಾಡ್ ನಿಂದ ಹೊಡೆದು ಬೈಕ್ ನಿಂದ ಕೆಳಗೆ ಬೀಳಿಸಿದ್ದಾರೆ.
ಬೆಂಗಳೂರು(ನ.09): ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದೆ. ನಗರದ ಸುಂಕದಕಟ್ಟೆಯ ಹೆಗ್ಗನಹಳ್ಳಿಯ ಬಿಜೆಪಿ ಮುಖಂಡ ಚಿಕ್ಕ ತಿಮ್ಮೇಗೌಡರನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಮನೆಯ ಬಳಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಚಿಕ್ಕ ತಿಮ್ಮೇಗೌಡ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಆಮಂತ್ರಣ ಪತ್ರಿಕೆಗಳನ್ನ ಹಂಚಿ ಮನೆಗೆ ವಾಪಸ್ ಆಗ್ತಿದ್ರು. ಈ ವೇಳೆ ಹಿಂದಿನಿಂದ ಬಂದ ಮೂವರು ತಲೆಗೆ ರಾಡ್ ನಿಂದ ಹೊಡೆದು ಬೈಕ್ ನಿಂದ ಕೆಳಗೆ ಬೀಳಿಸಿದ್ದಾರೆ.
ಕೆಳಗೆ ಬೀಳ್ತಿದ್ದ ಹಾಗೆ ಎದೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಿಕ್ಕತಿಮ್ಮೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದು,ಹಂತಕರ ಪತ್ತೆಗಾಗಿ 3ವಿಶೇಷ ತಂಡಗಳನ್ನ ರಚನೆ ಮಾಡಲಾಗಿದೆ. .