ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 3695 ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನಾಪತ್ತೆಯಾಗಿರುವ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕ ವಿಕ್ರಮ್‌ ಕೊಠಾರಿ, ತಾನೇನು ದೇಶ ಬಿಟ್ಟು ಓಡಿ ಹೋಗಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 3695 ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನಾಪತ್ತೆಯಾಗಿರುವ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕ ವಿಕ್ರಮ್‌ ಕೊಠಾರಿ, ತಾನೇನು ದೇಶ ಬಿಟ್ಟು ಓಡಿ ಹೋಗಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ಹೇಳೀಕೆ ಬಿಡುಗಡೆ ಮಾಡಿರುವ ಕೊಠಾರಿ ‘ಮೊದಲಿಗೆ ಮುಖ್ಯವಾದ ವಿಚಾರವೆಂದರೆ, ಇದೇನು ಹಗರಣವಲ್ಲ. ನಾನೋರ್ವ ಭಾರತೀಯ ನಾಗರಿಕನಾಗಿದ್ದು, ನನ್ನ ಹುಟ್ಟೂರಿನಲ್ಲಿದ್ದೇನೆ.

ನನ್ನ ಒಡೆತನದ ಕಂಪನಿಯನ್ನು ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಘೋಷಣೆ ಮಾಡಿವೆ. ಆದರೆ, ನಾನು ಸುಸ್ತಿದಾರನಲ್ಲ. ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್‌(ಎನ್‌ಸಿಎಲ್‌ಟಿ) ಕಾನೂನಿನಡಿ ವಿಚಾರಣೆಗೊಳಪಡಬೇಕಿದೆ. ಬ್ಯಾಂಕ್‌ಗಳ ಜತೆ ನಿಕಟವರ್ತಿಯಾಗಿದ್ದು, ಅವುಗಳು ನೀಡಿದ ಸಾಲವನ್ನು ಶೀಘ್ರದಲ್ಲೇ ಮರುಪಾವತಿಸುತ್ತೇನೆ,’ ಎಂದು ಹೇಳಿದ್ದಾರೆ.